ಶುಕ್ರವಾರ, ಡಿಸೆಂಬರ್ 13, 2019
27 °C
ಪಿಎನ್‌ಬಿ ಹಗರಣ: ಮೌನಿಯಾಗಿರುವ ಪ್ರಧಾನಿ ವಿರುದ್ಧ ವಾಗ್ದಾಳಿ

ಮೋದಿ ದೊಡ್ಡ ಜಾದೂಗಾರ: ರಾಹುಲ್ ವ್ಯಂಗ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ಮೋದಿ ದೊಡ್ಡ ಜಾದೂಗಾರ: ರಾಹುಲ್ ವ್ಯಂಗ್ಯ

ಜೊವಾಯ್‌/ಶಿಲ್ಲಾಂಗ್‌: ‘ಪ್ರಧಾನಿ ನರೇಂದ್ರ ಮೋದಿ ದೊಡ್ಡ ಜಾದೂಗಾರ. ಅವರು ನಮ್ಮ ಪ್ರಜಾಪ್ರಭುತ್ವವನ್ನೇ ಮಾಯ ಮಾಡುವಷ್ಟು ಶಕ್ತಿ ಹೊಂದಿದ್ದಾರೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವ್ಯಂಗ್ಯವಾಡಿದ್ದಾರೆ.

’ಬಹುಕೋಟಿ ಅಕ್ರಮ ಎಸಗಿರುವ ನೀರವ್‌ ಮೋದಿ ಮತ್ತು ವಿಜಯ್‌ ಮಲ್ಯ ಭಾರತದಿಂದ ಮಾಯವಾದರು, ವಿದೇಶದಲ್ಲಿ ಪ್ರತ್ಯಕ್ಷರಾದರು. ಇವೆಲ್ಲ ಮೋದಿ ಅವರ ಜಾದೂವಿನ ಪ್ರಭಾವ. ಅವರು ಏನು ಬೇಕಾದರೂ ಮಾಯ ಮಾಡಬಲ್ಲರು’ ಎಂದರು. ‘ಯಾವುದೇ ಬೆಲೆ ಕಟ್ಟಿಯಾದರೂ ದೇಶವನ್ನು ಆಳಲು ಮೋದಿ ಬಯಸಿದ್ದಾರೆ. ಆದರೆ ಸಾವಿರ ಸಾವಿರ ಕೋಟಿ ಲೂಟಿ ಮಾಡಿದ ಈ ಇಬ್ಬರ ಬಗ್ಗೆ ಮಾತ್ರ ಮೌನವಾಗಿದ್ದಾರೆ’ ಎಂದು ಕಿಡಿ ಕಾರಿದರು.

ಇನ್ನೊಂದೆಡೆ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ವಂಚನೆ ಹಾಗೂ ರಫೇಲ್ ಯುದ್ಧ ವಿಮಾನಗಳ ಖರೀದಿ ಹಗರಣಗಳಿಗೆ ಸಂಬಂಧಿಸಿದಂತೆ ಮೌನಿಯಾಗಿರುವ ಮೋದಿ ಅವರ ವಿರುದ್ಧ ರಾಹುಲ್‌ ಟ್ವೀಟ್‌ ಮಾಡುವ ಮೂಲಕವೂ ವಾಗ್ದಾಳಿ  ಮುಂದುವರಿಸಿದ್ದಾರೆ.

’ನಿಮ್ಮ ಉಪದೇಶದ ಕಾರ್ಯಕ್ರಮವಾಗಿರುವ ಮನ್‌ ಕೀ ಬಾತ್‌’ನಲ್ಲಿ ಈ ವಿಷಯದ ಬಗ್ಗೆ ಮಾತನಾಡಿ. ಇಡೀ ದೇಶ ಇವುಗಳ ಬಗ್ಗೆ ನಿಮ್ಮ ಬಾಯಿಯಿಂದ ಕೇಳಲು ಇಷ್ಟಪಡುತ್ತಿದೆ’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)