ಮಾನಸ ಸರೋವರ ಯಾತ್ರೆಗೆ ನೋಂದಣಿ ಆರಂಭ

7

ಮಾನಸ ಸರೋವರ ಯಾತ್ರೆಗೆ ನೋಂದಣಿ ಆರಂಭ

Published:
Updated:

ನವದೆಹಲಿ: ನಾಥು ಲಾ ಪಾಸ್ ಹಾಗೂ ಲಿಪುಲೇಖ್ ಪಾಸ್ ಮೂಲಕ  ಮಾನಸ ಸರೋವರ ಯಾತ್ರೆ ಕೈಗೊಳ್ಳಲು ನೋಂದಣಿ ಪ್ರಕ್ರಿಯೆ ಆರಂಭವಾಗಿದೆ ಎಂದು ವಿದೇಶಾಂಗ ಸಚಿವಾಲಯ ಬುಧವಾರ ಪ್ರಕಟಿಸಿದೆ. ಮಾರ್ಚ್ 23ರವರೆಗೆ ಅರ್ಜಿ ಸಲ್ಲಿಸಬಹುದು. ನಾಲ್ಕು ತಿಂಗಳ ಈ ಯಾತ್ರೆಯು ಜೂನ್ 8ರಿಂದ ಆರಂಭವಾಗಲಿದೆ.

ದೋಕಲಾದಲ್ಲಿ ಭಾರತ–ಚೀನಾ ನಡುವೆ ಕಳೆದ ವರ್ಷ ಗಡಿ ಬಿಕ್ಕಟ್ಟು ಉಂಟಾದ ಕಾರಣ ನಾಥುಲಾ ಪಾಸ್‌ ಮೂಲಕ ಕೈಲಾಸ ಮಾನಸ ಸರೋವರ ಯಾತ್ರಿಗಳಿಗೆ ಚೀನಾ ಸರ್ಕಾರ ತಡೆ ಒಡ್ಡಿತ್ತು. ಹವಾಮಾನ ವೈಪರೀತ್ಯದ ಕಾರಣ ನೀಡಿತ್ತು.

ಉತ್ತರಾಖಂಡದ ಲಿಪುಲೇಖ್ ಪಾಸ್ ಮೂಲಕ ಯಾತ್ರೆಗೆ ತೆರಳುವ ಪ್ರತಿ ವ್ಯಕ್ತಿಗೆ ₹1.6 ಲಕ್ಷ ವೆಚ್ಚವಾಗುತ್ತದೆ. ಈ ಮಾರ್ಗದಲ್ಲಿ ಕೆಲವು ಕಡೆ ಟ್ರೆಕ್ಕಿಂಗ್ ಮಾಡಿಕೊಂಡು ಹೋಗಬೇಕಾಗುತ್ತದೆ. ಆದರೆ ಸಿಕ್ಕಿಂ ಮೂಲಕ ಸಾಗುವ ನಾಥುಲಾ ಪಾಸ್ ಸಂಚಾರ ಸುಲಭವಿರುವ ಮಾರ್ಗ. ಹಿರಿಯ ನಾಗರಿಕರಿಗೆ ಇದು ಸೂಕ್ತ ಮಾರ್ಗ. 21 ದಿನ ಅವಧಿಯ ಈ ಪ್ರಯಾಣಕ್ಕೆ ಪ್ರತಿ ವ್ಯಕ್ತಿಗೆ ಸುಮಾರು ₹2 ಲಕ್ಷ ತಗಲುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry