ಗುರುವಾರ , ಡಿಸೆಂಬರ್ 12, 2019
25 °C
17 ಕಡೆ ಹೊಸದಾಗಿ ಶೋಧ ಕಾರ್ಯಾಚರಣೆ

ನೀರವ್‌ ಮೋದಿ ತೋಟದ ಮನೆಗೆ ಬೀಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರವ್‌ ಮೋದಿ ತೋಟದ ಮನೆಗೆ ಬೀಗ

ನವದೆಹಲಿ: ಮುಂಬೈ ಬಳಿಯ ಅಲಿಬಾಗ್‌ನಲ್ಲಿರುವ ನೀರವ್‌ ಮೋದಿಯ ₹32 ಕೋಟಿ ವೆಚ್ಚದ ಐಷಾರಾಮಿ ತೋಟದ ಮನೆಯನ್ನು ಸಿಬಿಐ ಅಧಿಕಾರಿಗಳು ಬುಧವಾರ ಬೀಗ ಜಡಿದಿದ್ದಾರೆ.

ಮತ್ತೊಂದೆಡೆ ಮುಂಬೈನ ನಾಲ್ಕು ಶೆಲ್‌ ಕಂಪನಿ ಸೇರಿದಂತೆ ದೇಶದ 17 ಕಡೆಗಳಲ್ಲಿ  ಹೊಸದಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ಕಾರ್ಯಕೈಗೊಂಡಿದ್ದಾರೆ.

ಏಳು ದಿನಗಳಿಂದ ಅಧಿಕಾರಿಗಳು ನಡೆಸುತ್ತಿರುವ ಶೋಧ ಕಾರ್ಯ ಇನ್ನೂ ಮುಂದುವರಿದಿದೆ. ಇಲ್ಲಿಯವರೆಗೆ ₹5,726 ಕೋಟಿ ಮೊತ್ತದ ಚಿನ್ನಾಭರಣ, ನಗದು ಮತ್ತು ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯ ನೀರವ್‌ ಮೋದಿಯ 36ಕ್ಕೂ ಹೆಚ್ಚು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇದೆ.

ಗ್ರಾಹಕರಿಗೆ ಪಿಎನ್‌ಬಿ ಅಭಯ

ನಮ್ಮಲ್ಲಿ ಸಾಕಷ್ಟು ದುಡ್ಡು ಇದ್ದು, ಗ್ರಾಹಕರು ಆತಂಕ ಪಡಬೇಕಾಗಿಲ್ಲ ಎಂದು ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಬುಧವಾರ ಅಭಯ ನೀಡಿದೆ.

ಹಗರಣಕ್ಕೆ ಸಿಲುಕಿದರೂ ಪರಿಸ್ಥಿತಿ ಎದುರಿಸುವ ಆರ್ಥಿಕ ಶಕ್ತಿ ಬ್ಯಾಂಕ್‌ಗೆ ಇದೆ. ವಹಿವಾಟಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಬ್ಯಾಂಕ್‌ ಟ್ವೀಟ್‌ ಮಾಡಿದೆ.

ಪ್ರತಿಕ್ರಿಯಿಸಿ (+)