ಫಿಲಿಪ್ಪೀನ್ಸ್: ನ್ಯಾಯಾಲಯಕ್ಕೆ ಅರ್ಜಿ

7

ಫಿಲಿಪ್ಪೀನ್ಸ್: ನ್ಯಾಯಾಲಯಕ್ಕೆ ಅರ್ಜಿ

Published:
Updated:

ಮನಿಲಾ: ಪಿಲಿಪ್ಪೀನ್ಸ್‌ನ ಕಮ್ಯೂನಿಷ್ಟ್‌ ಪಂಗಡಗಳು ಮತ್ತು ಅವುಗಳ ಸಶಸ್ತ್ರ ಘಟಕಗಳನ್ನು ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸುವಂತೆ ಇಲ್ಲಿನ ನ್ಯಾಯಾಂಗ ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೆ ಬುಧವಾರ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಾಂಗ ಇಲಾಖೆಯ ಈ ನಡೆ ಸರ್ಕಾರ ಮತ್ತು ಬಂಡುಕೋರರ ಪಡೆಗಳ ಮಧ್ಯೆ ಸ್ಥಗಿತಗೊಂಡಿರುವ ಶಾಂತಿ ಮಾತುಕತೆಯ ಪುನರಾರಂಭಕ್ಕೆ ಹಿನ್ನಡೆ ಉಂಟುಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ದೇಶದ ವಿವಿಧೆಡೆ ಬಂಡುಕೋರರು ನಡೆಸಿದ ಮಾರಣಾಂತಿಕ ದಾಳಿ ಮತ್ತು ಹಿಂಸಾಚಾರ ಪ್ರಕರಣಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry