‘ಚೀನಾ ಜತೆ ಸಂಬಂಧ: ಆತಂಕಪಡಬೇಕಿಲ್ಲ’

7

‘ಚೀನಾ ಜತೆ ಸಂಬಂಧ: ಆತಂಕಪಡಬೇಕಿಲ್ಲ’

Published:
Updated:

ಢಾಕಾ: ಚೀನಾ ಜೊತೆ ಬಾಂಗ್ಲಾದೇಶ ಸಂಬಂಧ ವೃದ್ಧಿಸಿಕೊಳ್ಳುತ್ತಿರುವ ಬಗ್ಗೆ ಭಾರತ ಆತಂಕಪಡಬೇಕಿಲ್ಲ ಎಂದು ಪ್ರಧಾನಿ ಶೇಖ್‌ ಹಸೀನಾ ಹೇಳಿದ್ದಾರೆ.

ಇಲ್ಲಿಗೆ ಮಂಗಳವಾರ ಭೇಟಿ ನೀಡಿದ್ದ ಭಾರತೀಯ ಪತ್ರಕರ್ತರ ನಿಯೋಗದೊಂದಿಗೆ ಮಾತನಾಡಿದ ಅವರು, ‘ದೇಶದ ಅಭಿವೃದ್ಧಿಗಾಗಿ ಮಾತ್ರ ಚೀನಾದೊಂದಿಗೆ ಸಂಬಂಧ ಬೆಳೆಸುತ್ತಿದ್ದೇವೆ ಹೊರತು ಅನ್ಯ ಉದ್ದೇಶವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ನಮ್ಮ ದೇಶದ ಉನ್ನತಿಗಾಗಿ ಬಂಡವಾಳ ಹಾಗೂ ಸಹಕಾರದ ಅಗತ್ಯವಿದೆ. ಭಾರತವೂ ಸೇರಿದಂತೆ ಚೀನಾ, ಜಪಾನ್‌ ಹಾಗೂ ಮಧ್ಯಪ್ರಾಚ್ಯ ದೇಶಗಳೂ ನಮ್ಮೊಂದಿಗೆ ಬಾಂಧವ್ಯ ಬೆಳೆಸಲು ಮುಂದೆ ಬರುತ್ತಿವೆ. ಇದನ್ನು ಸ್ವಾಗತಿಸಬೇಕಾಗಿದ್ದು ನಮ್ಮ ಜವಾಬ್ದಾರಿ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry