ಸ್ಟೂಡೆಂಟ್ಸ್‌ ಯೂನಿಯನ್‌ಗೆ ಜಯ

7

ಸ್ಟೂಡೆಂಟ್ಸ್‌ ಯೂನಿಯನ್‌ಗೆ ಜಯ

Published:
Updated:

ಬೆಂಗಳೂರು: ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡದವರು ಬಿಡಿಎಫ್‌ಎ ವತಿಯ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದ್ದಾರೆ.

ಅಶೋಕನಗರದಲ್ಲಿ ಇರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಸ್ಟೂಡೆಂಟ್ಸ್‌ ಯೂನಿಯನ್‌ 3–1 ಗೋಲುಗಳಿಂದ ಸೌತ್‌ ಯುನೈಟೆಡ್‌ ಎಫ್‌ಸಿ ತಂಡವನ್ನು ಮಣಿಸಿತು.

16ನೇ ನಿಮಿಷದಲ್ಲಿ ಅಮೋಸ್‌ ಗೋಲು ದಾಖಲಿಸಿ ಸ್ಟೂಡೆಂಟ್ಸ್‌ ಯೂನಿಯನ್‌ ತಂಡದ ಖಾತೆ ತೆರೆದರು. 51ನೇ ನಿಮಿಷದಲ್ಲಿ ಸ್ಯಾಮ್ಸನ್‌ ಚೆಂಡನ್ನು ಗುರಿ ಮುಟ್ಟಿಸಿದರು. 87ನೇ ನಿಮಿಷದಲ್ಲಿ ಅಕ್ಷಯ್‌ ಮೋಡಿ ಮಾಡಿದರು. ಸಹ ಆಟಗಾರ ಒದ್ದು ಕಳುಹಿಸಿದ ಚೆಂಡನ್ನು ಅವರು ಚುರುಕಾಗಿ ಗುರಿ ತಲುಪಿಸಿದರು. ಹೀಗಾಗಿ ಸ್ಟೂಡೆಂಟ್ಸ್‌ ತಂಡ 3–0ರ ಮುನ್ನಡೆ ಗಳಿಸಿತು.

‘ಎ’ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಬೆಂಗಳೂರು ಈಗಲ್ಸ್‌ 2–0 ಗೋಲುಗಳಿಂದ ಇನ್‌ಕಮ್‌ ಟ್ಯಾಕ್ಸ್‌ ತಂಡವನ್ನು ಮಣಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry