ಬುಧವಾರ, ಡಿಸೆಂಬರ್ 11, 2019
15 °C
ಮಹಿಳೆಯರ ಫಿಗರ್ ಸ್ಕೇಟಿಂಗ್‌ನಲ್ಲಿ ರಷ್ಯಾದ ಅಲಿನಾ ಜಗಿಟೋವ ಅಮೋಘ ಸಾಧನೆ

ಚಳಿಗಾಲದ ಒಲಿಂಪಿಕ್ಸ್‌: ಮ್ಯಾರಿಟ್ ಜಾರ್ಜನ್‌ ಅಪೂರ್ವ ಸಾಧನೆ

Published:
Updated:
ಚಳಿಗಾಲದ ಒಲಿಂಪಿಕ್ಸ್‌:  ಮ್ಯಾರಿಟ್ ಜಾರ್ಜನ್‌ ಅಪೂರ್ವ ಸಾಧನೆ

ಪಾಂಗ್ ಚಾಂಗ್‌, ದಕ್ಷಿಣ ಕೊರಿಯಾ (ಎಎಫ್‌ಪಿ): ಒಟ್ಟು 14 ಒಲಿಂಪಿಕ್‌ ಪದಕಗಳನ್ನು ಬಗಲಿಗೆ ಹಾಕಿಕೊಂಡ ನಾರ್ವೆಯ ಮ್ಯಾರಿಟ್‌ ಜಾರ್ಜನ್‌ ಚಳಿಗಾಲದ ಒಲಿಂಪಿಕ್ಸ್‌ನ ಅಪ್ರತಿಮ ಸಾಧಕಿಯಾಗಿ ಮೆರೆದರು.

ಬುಧವಾರ ನಡೆದ ಮಹಿಳೆಯರ ಸ್ಕೀಯಿಂಗ್‌ ಕ್ರಾಸ್‌ ಕಂಟ್ರಿ ತಂಡ ವಿಭಾಗ ದಲ್ಲಿ ಕಂಚಿನ ಪದಕ ಕೊರಳಿಗೇರಿಸಿ ಕೊಳ್ಳುವ ಮೂಲಕ ಅವರು ಅತಿ ಹೆಚ್ಚು ಪದಕಗಳನ್ನು ಗೆದ್ದ ದಾಖಲೆ ತಮ್ಮದಾಗಿಸಿಕೊಂಡರು.

ಬಯಾಥ್ಲಾನ್‌ನಲ್ಲಿ 13 ಪದಕ ಗೆದ್ದ ಒಲೇ ಈನರ್‌ ಜೊರ್ನಾಡಲೆನ್‌ ಅವರನ್ನು ಜಾರ್ಜನ್‌ ಮೀರಿ ನಿಂತರು.

ಪುರುಷರ ಸ್ಕೀಯಿಂಗ್ ಸ್ಪರ್ಧೆಯಲ್ಲಿ ರಷ್ಯಾದ ಸರ್ಜಿ ರಿಡ್ಜಿಕ್‌ ಕಂಚು ಗೆದ್ದರು. ಕೆನಡಾದ ಬ್ರೆಡಿ ಲೆಮಾನ್‌ ಚಿನ್ನ ಗೆದ್ದರೆ ಸ್ವಿಟ್ಜರ್ಲೆಂಡ್‌ನ ಮಾರ್ಕ್‌ ಬಿಶೊಫೆಜರ್‌ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಮಹಿಳೆಯರ ಫಿಗರ್ ಸ್ಕೇಟಿಂಗ್‌ನಲ್ಲಿ ರಷ್ಯಾದ ಅಲಿನಾ ಜಗಿಟೋವ ಬುಧವಾರ ಅಮೋಘ ಸಾಧನೆ ಮಾಡಿ ಗಮನ ಸೆಳೆದರು. ರಷ್ಯಾದ ಅಥ್ಲೀಟ್‌ಗಳ ಪ್ರಾಬಲ್ಯ ಇರುವ ಈ ವಿಭಾಗದಲ್ಲಿ ಅವರು ಉತ್ತಮ ಆಟವಾಡಿ ಮುನ್ನುಗ್ಗಿದರು.

ಶುಕ್ರವಾರ ನಡೆಯಲಿರುವ ಅಂತಿಮ ಹಂತದ ಸ್ಪರ್ಧೆಯಲ್ಲೂ ಸಾಧನೆ ಮಾಡಿ ಗೆದ್ದರೆ ಫಿಗರ್ ಸ್ಕೇಟಿಂಗ್‌ನಲ್ಲಿ ಚಾಂಪಿಯನ್ ಆದ ಅತಿ ಕಿರಿಯ ಅಥ್ಲೀಟ್‌ ಎಂಬ ಖ್ಯಾತಿಗೆ ಪಾತ್ರರಾಗುವರು.

ಅಮೆರಿಕ ತಂಡಕ್ಕೆ ಸೋಲು ಪುರುಷರ ಹಾಕಿಯಲ್ಲಿ ಅಮೆರಿಕದ ಕನಸು ಭಗ್ನಗೊಂಡಿತು. ಬುಧವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಈ ತಂಡವನ್ನು ಜೆಕ್ ಗಣರಾಜ್ಯದ ಆಟಗಾರರು 3–2ರಿಂದ ಮಣಿಸಿದರು.

ಪ್ರತಿಕ್ರಿಯಿಸಿ (+)