ಬುಧವಾರ, ಡಿಸೆಂಬರ್ 11, 2019
26 °C

ಫುಟ್‌ಬಾಲ್‌: ಸೂಪರ್ ಸ್ಟಾರ್‌ ಶುಭಾರಂಭ

Published:
Updated:
ಫುಟ್‌ಬಾಲ್‌: ಸೂಪರ್ ಸ್ಟಾರ್‌ ಶುಭಾರಂಭ

ವಿಜಯಪುರ: ವಿಜಯಪುರದ ಸೂಪರ್‌ ಸ್ಟಾರ್‌ ತಂಡ ದಿವಂಗತ ಬಿ.ಎಂ.ಪಾಟೀಲ ಸ್ಮರಣಾರ್ಥ ನಡೆಯುತ್ತಿರುವ ರಾಷ್ಟ್ರಮಟ್ಟದ ಆಹ್ವಾನಿತ ಫುಟ್‌ಬಾಲ್ ಟೂರ್ನಿಯ ಬುಧವಾರದ ಪಂದ್ಯದಲ್ಲಿ 5–0 ಗೋಲುಗಳಿಂದ ಬಾಗಲಕೋಟೆ ತಂಡದ ವಿರುದ್ಧ ಗೆದ್ದಿತು.

ವಿಜಯಪುರ ತಂಡದ ಮುಸ್ಲಿಮ್‌ ಮೂರು ಮತ್ತು ಪುಸ್ತಾಫ್ ಎರಡು ಗೋಲುಗಳನ್ನು ಗಳಿಸಿದ್ದರಿಂದ ತಂಡ ಏಕಪಕ್ಷೀಯವಾಗಿ ಜಯ ಸಾಧಿಸಿತು. ನೈಜೇರಿಯಾ ಆಟಗಾರರು ಇರುವ ಸೂಪರ್ ಸ್ಟಾರ್‌ ತಂಡ ಪಂದ್ಯದ ಆರಂಭದ ನಿಮಿಷದಿಂದಲೇ ಪ್ರಾಬಲ್ಯ ಮೆರೆಯಿತು.

ಉದ್ಘಾಟನಾ ಪಂದ್ಯದಲ್ಲಿ ಸೊಲ್ಲಾಪುರ ತಂಡದ ವಿರುದ್ಧ ಜಹೀರಾಬಾದ್‌ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದಿತು. ನಿಗದಿತ ಅವಧಿ ಮುಗಿದಾಗ ಉಭಯ ತಂಡಗಳು ತಲಾ ಒಂದು ಗೋಲು ಗಳಿಸಿದ್ದವು.

ಆದ್ದರಿಂದ ಫಲಿತಾಂಶ ನಿರ್ಧರಿಸಲು ಶೂಟೌಟ್‌ ಮೊರೆ ಹೋಗಲಾಯಿತು. ಆಗ ಜಹೀರಾಬಾದ್‌ 4–3ರಲ್ಲಿ ಜಯಿಸಿತು.

ಪ್ರತಿಕ್ರಿಯಿಸಿ (+)