ಬುಧವಾರ, ಡಿಸೆಂಬರ್ 11, 2019
24 °C

ಅತ್ಯುತ್ತಮ ಗೇಮ್ ಫಿನಿಷರ್ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ ದೋನಿ, ಟ್ವಿಟರ್‌ನಲ್ಲಿ ಮೆಚ್ಚುಗೆ

Published:
Updated:
ಅತ್ಯುತ್ತಮ ಗೇಮ್ ಫಿನಿಷರ್ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ ದೋನಿ, ಟ್ವಿಟರ್‌ನಲ್ಲಿ ಮೆಚ್ಚುಗೆ

ಸೆಂಚೂರಿಯನ್‌: ಇಲ್ಲಿನ ಸೂಪರ್‌ಸ್ಪೋರ್ಟ್ಸ್‌ ಪಾರ್ಕ್‌ ಅಂಗಳದಲ್ಲಿ ಬುಧವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟ್ವೆಂಟಿ–20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ ಎಂ.ಎಸ್‌. ದೋನಿ ಅವರು ಅತ್ಯುತ್ತಮ ಗೇಮ್ ಫಿನಿಷರ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು.

ಈ ಪಂದ್ಯದಲ್ಲಿ ಭಾರತದ ಎದುರು ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ವಿರಾಟ್‌ ಕೊಹ್ಲಿ ಪಡೆ ಆರಂಭಿಕ ಸಂಕಷ್ಟ ಎದುರಿಸಿ, 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 188ರನ್‌ ಗಳಿಸಿತು.

ಮನೀಷ್‌ ಪಾಂಡೆ (ಔಟಾಗದೆ 79; 48ಎ, 6ಬೌಂ, 3ಸಿ) ಮತ್ತು ಮಹೇಂದ್ರ ಸಿಂಗ್‌ ದೋನಿ (ಔಟಾಗದೆ 52; 28ಎ, 4ಬೌಂ, 3ಸಿ) ಅಬ್ಬರಿಸಿದರು. ಇವರು ಮುರಿಯದ ಐದನೇ ವಿಕೆಟ್‌ ಪಾಲುದಾರಿಕೆಯಲ್ಲಿ 98ರನ್‌ ಕಲೆಹಾಕಿ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು.

ದೋನಿ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಅವರ ಆಟಕ್ಕೆ ಬಿಸಿಸಿಐ, ಹಿರಿಯ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್‌, ಮೊಹಮ್ಮದ್‌ ಕೈಫ್‌, ಆಕಾಶ್‌ ಚೋಪ್ರಾ ಸೇರಿದಂತೆ ಹಲವರು ಟ್ವಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತ ನೀಡಿದ 189 ರನ್‌ ಗುರಿ ಬೆನ್ನಟ್ಟಿದ ಹರಿಣಗಳ ನಾಡಿನ ತಂಡ 8 ಎಸೆತಗಳು ಬಾಕಿ ಇರುವಂತೆ ಗೆಲುವಿನ ದಡ ಸೇರಿತು.

*

3 ಪಂದ್ಯಗಳ ಟ್ವಿಂಟಿ ಕ್ರಿಕೆಟ್‌ ಸರಣಿಯಲ್ಲಿ ಉಭಯ ತಂಡಗಳು 1–1ರಲ್ಲಿ ಸಮಬಲ ಸಾಧಿಸಿವೆ.

*

*

ಪ್ರತಿಕ್ರಿಯಿಸಿ (+)