ಭಾನುವಾರ, ಡಿಸೆಂಬರ್ 8, 2019
25 °C

ಕೆನಡಾ ಪ್ರಧಾನಿ ಪತ್ನಿ ಜತೆ ಖಲಿಸ್ತಾನ್ ಉಗ್ರನ ಫೋಟೊ: ಔತಣ ಕೂಟದ ಅತಿಥಿಗಳ ಪಟ್ಟಿಯಲ್ಲೂ ಇತ್ತು ಹೆಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆನಡಾ ಪ್ರಧಾನಿ ಪತ್ನಿ ಜತೆ ಖಲಿಸ್ತಾನ್ ಉಗ್ರನ ಫೋಟೊ: ಔತಣ ಕೂಟದ ಅತಿಥಿಗಳ ಪಟ್ಟಿಯಲ್ಲೂ ಇತ್ತು ಹೆಸರು

ನವದೆಹಲಿ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಅವರ ಪತ್ನಿ ಸೋಫಿ ಗ್ರಗೋರಿ ಭಾರತ ಪ್ರವಾಸ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಸೋಫಿ ಜತೆಗೆ ಸಿಖ್ ಉಗ್ರ ಜಸ್ಪಾಲ್ ಅತ್ವಾಲ್ ನಿಂತಿರುವ ಫೊಟೊ ಪ್ರಕಟಗೊಂಡಿದ್ದು ಅಂತರ್ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ಮಂಗಳವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೋಫಿ ಗ್ರೆಗೋರಿ ಮತ್ತು ಅತ್ವಾಲ್ ಫೋಟೊ ಸೆರೆಹಿಡಿಯಲಾಗಿದೆ ಎನ್ನಲಾಗಿದೆ.

ಈ ಮಧ್ಯೆ, ಕೆನಡಾ ಪ್ರಧಾನಿ ದೆಹಲಿಯಲ್ಲಿ ಆಯೋಜಿಸಿರುವ ಔತಣಕೂಟಕ್ಕೆ ಆಹ್ವಾನಿಸಲಾಗಿರುವ ಅತಿಥಿಗಳ ಪಟ್ಟಿಯಲ್ಲೂ ಖಲಿಸ್ತಾನ್ ಉಗ್ರ ಅತ್ವಾಲ್ ಹೆಸರಿತ್ತು. ಮಾಧ್ಯಮಗಳ ವರದಿ ಬಳಿಕ ಕೆನಡಾ ಸರ್ಕಾರ ಅತಿಥಿಗಳ ಪಟ್ಟಿಯಿಂದ ಉಗ್ರನ ಹೆಸರು ತೆರವುಗೊಳಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಲು ವಿದೇಶಾಂಗ ವ್ಯವಹಾರಗಳ ಇಲಾಖೆ ನಿರಾಕರಿಸಿದೆ.

ಖಲಿಸ್ತಾನ್ ಪರ ಚಳವಳಿಗಾರರ ಮೃದು ಧೋರಣೆ ಹೊಂದಿರುವ ಬಗ್ಗೆ ಜಸ್ಟಿನ್ ಟ್ರುಡೊ ಸರ್ಕಾರ ಈಗಾಗಲೇ ವಿರೋಧಗಳನ್ನು ಎದುರಿಸುತ್ತಿದೆ.

ಅಕಾಲಿದಳದ ನಾಯಕ ಮಲ್ಕಿಯತ್ ಸಿಂಗ್ ಸಿಧು ಅವರ ಮೇಲೆ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದ 1986ರ ಕರಣಕ್ಕೆ ಸಂಬಂಧಿಸಿ ಅತ್‌ವಾಲ್ ಮತ್ತು ಇತರ ಮೂವರನ್ನು ಅಪರಾಧಿಗಳು ಎಂದು ಪರಿಗಣಿಸಲಾಗಿತ್ತು. ಆಗ ಪಂಜಾಬ್‌ ಸರ್ಕಾರದಲ್ಲಿ ಸಚಿವರಾಗಿದ್ದ ಸಿಧು ಅಪಾಯದಿಂದ ಪಾರಾಗಿದ್ದರು. ಆದರೆ, 1991ರಲ್ಲಿ ಸಿಖ್ ಉಗ್ರರ ದಾಳಿಗೆ ಬಲಿಯಾಗಿದ್ದರು.

ಇವನ್ನೂ ಓದಿ...

* ರೋಟಿ ಮಾಡಿದ ಕೆನಡಾ ಪ್ರಧಾನಿ

ಲಿಂಗತ್ವ ಅಸಮಾನತೆ ಕೊನೆ: ಕೆನಡಾ ಪ್ರಧಾನಿ ಪತ್ನಿ ಸೋಫಿ ಕರೆ

ಪ್ರತಿಕ್ರಿಯಿಸಿ (+)