ಬುಧವಾರ, ಡಿಸೆಂಬರ್ 11, 2019
21 °C

ದೇಶದ ಮೊದಲ ಮಹಿಳಾ ‘ಫೈಟರ್‌ ಪೈಲಟ್‌’ ಆಗಿ ಸೇವೆ ಆರಂಭಿಸಿದ ಅವನಿ ಚರ್ತುವೇದಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ದೇಶದ ಮೊದಲ ಮಹಿಳಾ ‘ಫೈಟರ್‌ ಪೈಲಟ್‌’ ಆಗಿ ಸೇವೆ ಆರಂಭಿಸಿದ ಅವನಿ ಚರ್ತುವೇದಿ

ನವದೆಹಲಿ: ಯುದ್ದ ವಿಮಾನದ ಮೊದಲ ಮಹಿಳಾ ‘ಫೈಟರ್‌ ಪೈಲಟ್‌’ ಆಗಿ ಅವನಿ ಚರ್ತುವೇದಿ ಅವರು ಸೇವೆ ಆರಂಭಿಸಿದ್ದಾರೆ.

ತರಬೇತಿ ಪೂರ್ಣಗೊಳಿಸಿದ್ದ ಅವನಿ ಚರ್ತುವೇದಿ ಅವರು ಬುಧವಾರ ವಾಯುಪಡೆಗೆ ಸೇರ್ಪಡೆಯಾಗಿದ್ದಾರೆ.

ಜಮ್ನಾನಗರ ವಾಯನೆಲೆಯಲ್ಲಿ ವಿಮಾನ ಹಾರಾಟ ಆರಂಭಿಸಿದ ಅವರು ಯಶಸ್ವಿಯಾಗಿ ಮಿಷನ್ ಪೂರ್ಣಗೊಳಿಸಿದರು.

2016ರ ಮಾರ್ಚ್‌ನಲ್ಲಿ ಟ್ರೈನಿ ಅಧಿಕಾರಿಗಳಾದ ಭವಾನಿ ಕಾಂತ್‌, ಅವನಿ ಚರ್ತುವೇದಿ ಮತ್ತು ಮೋಹನಾ ಸಿಂಗ್‌ ಅವರು ಸ್ವ ಇಚ್ಛೆಯಿಂದ ‘ಫೈಟರ್‌ ಪೈಲಟ್‌ಗಳಾಗಲು ಮುಂದೆ ಬಂದಿದ್ದರು.

ಸದ್ಯ ಇವರು ಹೈದರಾಬಾದ್‌ ಸಮೀಪದಲ್ಲಿರುವ ‘ಐಎಎಫ್‌’ ಅಕಾಡೆಮಿಯಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದಾರೆ. ತರಬೇತಿ ಪೂರ್ಣಗೊಂಡ ನಂತರ ವಾಯುಪಡೆ ಇವರನ್ನು ಯುದ್ದ ವಿಮಾನಗಳ ಪೈಲಟ್‌ಗಳಾಗಿ ನೇಮಕ ಮಾಡಿಕೊಳ್ಳಲಿದೆ ಎಂದು ಕೇಂದ್ರ ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ...

ವಾಯುಪಡೆಗೆ ಮಹಿಳಾ ‘ಫೈಟರ್‌ ಪೈಲಟ್‌’ಗಳ ನೇಮಕ ಶೀಘ್ರದಲ್ಲಿ

***

*

*

*

*

ಪ್ರತಿಕ್ರಿಯಿಸಿ (+)