ಬುಧವಾರ, ಡಿಸೆಂಬರ್ 11, 2019
23 °C

ಮೈಸೂರಿನ ಕುವೆಂಪು ನಗರದಲ್ಲಿ ಭೂಮಿ ಕಂಪಿಸಿದ ಅನುಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರಿನ ಕುವೆಂಪು ನಗರದಲ್ಲಿ ಭೂಮಿ ಕಂಪಿಸಿದ ಅನುಭವ

ಮೈಸೂರು: ಇಲ್ಲಿನ ಕುವೆಂಪು ನಗರದ ಕೆಲ ಮನೆಗಳಲ್ಲಿ ಭೂಮಿ ನಡುಗಿದ ಅನುಭವವಾಗಿದ್ದು, ಭೂಕಂಪ ಉಂಟಾಗಿದೆ ಎಂಬ ಆತಂಕ ಎದುರಾಗಿದೆ.

ಕುವೆಂಪುನಗರದ 3 ಮತ್ತು 8ನೇ ಕ್ರಾಸ್ ಕೆಲ ನಿವಾಸಿಗಳಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ಮಧ್ಯಾಹ್ನ 12.35ಕ್ಕೆ ದೊಡ್ಡ ಶಬ್ಧ ಕೇಳಿ ಬಂದಿದೆ. ಅನೇಕರು ಮನೆಯಿಂದ ಹೊರಗೆ ಬಂದಿದ್ದಾರೆ.

ನೆಲದ ಮೇಲೆ ನಿಂತವರ ಕಾಲು ನಡುಗಿವೆ. ಕುಳಿತವರಿಗೆ ಭೂಮಿ ಕಂಪಿಸಿದಂತೆ ಆಗಿದೆ. ಎಲ್ಲರೂ ಮನೆಯಿಂದ ಹೊರಗೆ ಬಂದಿದ್ದಾರೆ. ಇದು ಭೂಕಂಪವೆ ಎಂಬುದು ಇನ್ನೂ ಖಚಿತವಾಗಿಲ್ಲ.

ಪ್ರತಿಕ್ರಿಯಿಸಿ (+)