ಸೋಮವಾರ, ಡಿಸೆಂಬರ್ 9, 2019
21 °C

ವೀಕ್ಷಕರ ವರದಿ ನಂತರ ಹ್ಯಾರಿಸ್‌ಗೆ ಟಿಕೆಟ್ ಕೊಡುವ ನಿರ್ಧಾರ: ಪರಮೇಶ್ವರ್

Published:
Updated:
ವೀಕ್ಷಕರ ವರದಿ ನಂತರ ಹ್ಯಾರಿಸ್‌ಗೆ ಟಿಕೆಟ್ ಕೊಡುವ ನಿರ್ಧಾರ: ಪರಮೇಶ್ವರ್

ಬೆಂಗಳೂರು: ಎರಡನೇ ಹಂತದ ಪ್ರವಾಸದಲ್ಲಿ ಮಹದಾಯಿ, ನೀರಾವರಿ ವಿಷಯವನ್ನು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಸ್ತಾಪಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡದಲ್ಲಿ ಜಿಲ್ಲೆಗಳಲ್ಲಿ ರಾಹುಲ್‌ ಗಾಂಧಿ ಅವರು ಪ್ರವಾಸ ಮಾಡಲಿದ್ದಾರೆ ಎಂದು ತಿಳಿಸಿದರು.

ನಿಗದಿಯಾದ ಸ್ಥಳಗಳಲ್ಲಿ ಸಮಾವೇಶ, ರೋಡ್ ಶೋ, ಪಕ್ಷದ ನಾಯಕರ ಜೊತೆ ಸಭೆ ಮಾಡಲಿದ್ದಾರೆ. ಇದರಲ್ಲಿ ಧಾರ್ಮಿಕ ಕೇಂದ್ರ ಭೇಟಿ ಸೇರಿಸಿಲ್ಲ. ಅವರಿಗೆ ಇಷ್ಟವಿದ್ದಲ್ಲಿ ಭೇಟಿಕೊಡುವರು ಎಂದು ಮಾಹಿತಿ ನೀಡಿದರು.

ಉದ್ಯಮಿ ಪುತ್ರ ವಿದ್ವತ್ ಮೇಲೆ ಶಾಸಕ ಎನ್‌.ಎ.ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಹಾಗೂ ಅವನ ಸಹಚರರು ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುದ ಅವರು, ‘ಈ ಘಟನೆಯಿಂದ ಪಕ್ಷಕ್ಕೆ ಮುಜುಗರ ಆಗಿದ್ದು ನಿಜ. ಯಾರನ್ನು ಪಕ್ಷ ಸಹಿಸಲ್ಲ; ಎಚ್ಚರಿಕೆ. ವೀಕ್ಷಕರ ವರದಿ ನಂತರ ಹ್ಯಾರಿಸ್‌ಗೆ ಟಿಕೆಟ್ ಕೊಡುವ ನಿರ್ಧಾರ’ ಎಂದು ತಿಳಿಸಿದರು.

‘ರಾಹುಲ್ ಬಚ್ಚಾ’ ಎಂಬ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಪಕ್ಷದ ಅಧ್ಯಕ್ಷರಿಗೆ ಈ ರೀತಿ ಹೇಳುವುದು ಸರಿಯಲ್ಲ ಎಂದರು.

ಮಾರ್ಚ್ ಎರಡನೇ ವಾರದಲ್ಲಿ ಪ್ರಣಾಳಿಕೆ ಬಿಡುಗಡೆ: ವೀರಪ್ಪ ಮೊಯಿಲಿ

ಮಾರ್ಚ್ ಎರಡನೇ ವಾರದಲ್ಲಿ ರಾಹುಲ್‌ ಗಾಂದಿಯಿಂದ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಆರು ವಿಭಾಗದಲ್ಲಿ ಮತ್ತು ಜಿಲ್ಲಾ ಕೇಂದ್ರದಲ್ಲೂ ಸ್ಥಳೀಯ ಪ್ರಣಾಳಿಕೆ ಬಿಡುಗಡೆಯಾಗಲಿದೆ. ಇದೇ ವೇಳೆ ರಾಹುಲ್‌ಗಾಂಧಿ ಅವರು ವಿಡಿಯೊ ಸಂವಾದ ನಡೆಸುವರು ಎಂದು ಕೆಪಿಸಿಸಿ ಚುನಾವಣಾ ಪ್ರಣಾಳಿಕೆ‌ ಸಮಿತಿ ಅಧ್ಯಕ್ಷ ವೀರಪ್ಪ ಮೊಯಿಲಿ ತಿಳಿಸಿದರು.

ಪ್ರತಿಕ್ರಿಯಿಸಿ (+)