ಶುಕ್ರವಾರ, ಡಿಸೆಂಬರ್ 13, 2019
27 °C

ಬಿಜೆಪಿ ಅವಧಿಯಲ್ಲಿ ನಗರದ ಕ್ರೈಂ ರೇಟ್‌ ಶೇ 7, ಈಗ ಶೇ 5ಕ್ಕೆ ಇಳಿಕೆ: ರಾಮಲಿಂಗಾ ರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಅವಧಿಯಲ್ಲಿ ನಗರದ ಕ್ರೈಂ ರೇಟ್‌ ಶೇ 7, ಈಗ ಶೇ 5ಕ್ಕೆ ಇಳಿಕೆ: ರಾಮಲಿಂಗಾ ರೆಡ್ಡಿ

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದ ಶೇ 7ರಷ್ಟು ಅಪರಾಧ ಪ್ರಮಾಣವನ್ನು ಶೇ 5ಕ್ಕೆ ಇಳಿಸುವಲ್ಲಿ ಕಾಂಗ್ರೆಸ್‌ ಸರ್ಕಾರ ಯಶಸ್ವಿಯಾಗಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಟ್ವೀಟಿಸಿದ್ದಾರೆ.

‘ಹೋದಲ್ಲೆಲ್ಲ ಬೆಂಗಳೂರು ಎಂದರೆ ಗೂಂಡಾ ವಿಷಯ, ನೈಟ್‌ಕ್ಲಬ್ ಜೂಜಾಟ, ಮಾದಕ ದ್ರವ್ಯ ಸರಬರಾಜು ಜಾಲ.. ಎಂಬುದೇ ಮಾತು. ಈ ಕುರಿತು ಏನು ಕ್ರಮ ತೆಗೆದುಕೊಳ್ಳುತ್ತೀರಿ’ ಎಂದು ಕೇಂದ್ರ ಸಚಿವ ಸದಾನಂದ ಗೌಡ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಮಂಗಳವಾರ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ರಾಮಲಿಂಗಾ ರೆಡ್ಡಿ, 'ನಾನು ಗೃಹ ಸಚಿವನಾಗಿ 30 ಅಂಶಗಳ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆಗೆ ನೀಡಿದ್ದು ಇಲಾಖೆ ಸಹ ಪ್ರಾಮಾಣಿಕವಾಗಿ ಅದನ್ನು ಅನುಷ್ಠಾನಗೊಳಿಸಲು ಪ್ರಯತ್ನ ನಡೆಸಿದೆ' ಎಂದಿದ್ದಾರೆ.

‘ಆನ್‌ಲೈನ್ ಜೂಜು ಇವಕ್ಕೆಲ್ಲ ಕಾರಣ ಎಂಬ ಖಚಿತ ಮಾಹಿತಿ ಇದೆ. ಇದನ್ನು ನಿಲ್ಲಿಸುವಲ್ಲಿ ನೀವು ಏನು ಕ್ರಮ ತೆಗೆದುಕ್ಕೊಳ್ಳುತ್ತೀರಿ. ಬೆಂಗಳೂರಿನ ಸಂಸದನಾಗಿ ಕೇಳುತ್ತಿದ್ದೇನೆ’ ಎಂದು ಸದಾನಂದ ಗೌಡ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಉನ್ನತ ಮಟ್ಟದ ಆಕ್ಷನ್ ಕಮಿಟಿ ರಚಿಸುವ ಕುರಿತೂ ಸಲಹೆ ನೀಡಿದ್ದರು.

ಬೆಂಗಳೂರಿನಲ್ಲಿ ಅಪರಾಧ ಪ್ರಮಾಣ ಕಡಿಮೆ ಮಾಡಲು ಎಲ್ಲ ಪ್ರಯತ್ನ ಮಾಡಲಾಗಿದೆ ಎಂದಿರುವ ಸಚಿವ ರಾಮಲಿಂಗಾ ರೆಡ್ಡಿ, ‘ಈ ಹಿಂದೆ ಪಂಜಾಬ್‌ನಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ನಡೆಯುತ್ತಿದ್ದ ಡ್ರಗ್ಸ್‌ ದಂಧೆಯನ್ನು ನಮ್ಮ ಪೊಲೀಸರು ರಾಜ್ಯಕ್ಕೆ ಪ್ರವೇಶಿಸಲು ಬಿಟ್ಟಿಲ್ಲ’ ಬಿಜೆಪಿಯನ್ನು ಕುಟುಕಿದ್ದಾರೆ.

ಪ್ರತಿಕ್ರಿಯಿಸಿ (+)