ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮೋತ್ಸವದ ಸಾಂಸ್ಕೃತಿಕ ಸೇತುವೆ

Last Updated 22 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಈ ಬಾರಿ ವಲಸೆ ವಿಷಯಾಧಾರಿತ ಸಿನಿಮಾಗಳನ್ನು ತೋರಿಸಲಾಗುತ್ತದೆ. ವಲಸೆ ಮತ್ತು ಭಾಷೆಯ ತಲ್ಲಣ, ರಾಜಕೀಯ ಬದಲಾವಣೆಯಂಥ ವಿಷಯ ಕುರಿತು ಅನೇಕ ಸಿನಿಮಾಗಳು ತಯಾರಾಗುತ್ತಿವೆ. ಇಂಥ ಸಿನಿಮಾಗಳ್ನು ನೋಡುವ ಜನರು ತಮ್ಮ ಕೃತಿ ಕಟ್ಟುವಿಕೆಯಲ್ಲಿ ಇಂಥ ವಿಷಯಗಳನ್ನು ತರುವ ಪ್ರಯತ್ನ ಮಾಡಬಹುದು.

ಸಿನಿಮೋತ್ಸವದಲ್ಲಿ ಪ್ರಧಾನವಾಗಿ ಕಥನ ಕ್ರಮಗಳನ್ನು (ನಿರೂಪಣಾ ಕ್ರಮ) ಬದಲಾವಣೆಯ ಹಿನ್ನೆಲೆಯಲ್ಲಿ ಗಮನಿಸಬಹುದು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಕಥನ ಕ್ರಮವನ್ನು ಕನ್ನಡ ಸಿನಿಮಾರಂಗ ಅಳವಡಿಕೊಳ್ಳಬಹುದು. ಅತಿಥಿಗಳ ಜತೆಗಿನ ಮುಖಾಮುಖಿ, ಭೇಟಿ, ಮಾತುಕತೆಯಿಂದ ಅಲ್ಲಿನ ಮತ್ತು ಇಲ್ಲಿನ ಚಿತ್ರ ತಯಾರಿಕೆಯ ಸಮಸ್ಯೆಗಳ ಕುರಿತು ಪರಸ್ಪರ ಪರಿಹಾರ ಕಂಡುಕೊಳ್ಳಬಹುದು. ಇದು ಒಬ್ಬರಿಗೊಬ್ಬರು ಮಾತನಾಡಿದರೆ ಮಾತ್ರ ಸೃಷ್ಟಿಯಾಗುವ ಸೇತುವೆ.

ಹೊಸಬಗೆಯ ಸಿನಿಮಾ ತಯಾರಿಕರಿಗೆ ಬಂಡವಾಳ ಹುಡುಕುವುದು ಕಷ್ಟ. ಸಿನಿಮೋತ್ಸವದಲ್ಲಿ ಸಿನಿಮಾ ನೋಡುವುದಕ್ಕಿಂತ ಇತರ ದೇಶಗಳ ನಿರ್ದೇಶಕರು, ಚಿತ್ರತಯಾರಕರು, ನಟರ ಜತೆ ಮಾತುಕತೆ ನಡೆಸಿದರೆ ಸಹ ನಿರ್ಮಾಣದ ಕುರಿತು ಯೋಜನೆಗಳನ್ನು ರೂಪಿಸಬಹುದು. ಉದಾಹರಣೆಗೆ ಸ್ಪೇನ್‌ನಲ್ಲಿ ಚಿತ್ರೀಕರಣ ಮಾಡಿದರೆ ಶೇ 60ರಷ್ಟು ಊಟ ಮತ್ತು ವಸತಿಯನ್ನು ಅಲ್ಲಿನ ಸರ್ಕಾರವೇ ನೀಡುತ್ತದೆಯಂತೆ. ಇಂಥ ತಿಳಿವಳಿಕೆಯನ್ನು ಸಿನಿಮೋತ್ಸವದ ಮೂಲಕ ಪಡೆಯಬಹುದು.

ಇಲ್ಲಿ ತಯಾರಾದ ಚಿತ್ರ, ತಯಾರಿಸುವ ಚಿತ್ರದ ಕುರಿತು ಇತರ ದೇಶಗಳ ಗಣ್ಯರಿಗೆ ಪರಿಚಯಿಸುವ ಮೂಲಕ ಅಲ್ಲಿನ ಮಾರುಕಟ್ಟೆಯನ್ನು ಅರಿಯಬಹುದು. ಸಿನಿಮಾ ಕುರಿತ ಸಾಂಸ್ಕೃತಿಕ ಹಂಚುವಿಕೆ ಎರಡೂ ಬದಿಯ ಉದ್ಯಮಗಳಿಗೆ ದೊಡ್ಡ ಲಾಭ ಕೊಡುತ್ತದೆ. ಸಿನಿಮೋತ್ಸವದ ಅತ್ಯುತ್ತಮ 20 ಸಿನಿಮಾಗಳನ್ನು ಆಯ್ಕೆ ಮಾಡಿ, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರದರ್ಶಿಸಬೇಕು. ಇದರಿಂದ ಆಯಾ ಭಾಗದ ಸಿನಿಮಾ ತಯಾರಿಕರಿಗೆ ಹೊಸ ರೀತಿಯ ಉತ್ಸಾಹ ಮತ್ತು ಪ್ರೇರಣೆಯನ್ನು ಒದಗಿಸಿದಂತಾಗಿದೆ. ಇದರಿಂದ ಉದ್ಯಮಕ್ಕೆ ಹೊಸಬರ ಪ್ರವೇಶಕ್ಕೆ ಅನುಕೂಲವಾಗುತ್ತದೆ.

–ಬಿ. ಸುರೇಶ್, ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT