ಮಾಧ್ಯಮ ವರದಿ ಅಲ್ಲಗಳೆದ ಚೀನಾ

7
ವೈಮಾನಿಕ ರಕ್ಷಣಾ ವ್ಯವಸ್ಥೆ

ಮಾಧ್ಯಮ ವರದಿ ಅಲ್ಲಗಳೆದ ಚೀನಾ

Published:
Updated:

ಬೀಜಿಂಗ್ : ಭಾರತದ ಗಡಿಯಲ್ಲಿ ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂಬ ವರದಿಯನ್ನು ಚೀನಾ ಗುರುವಾರ ತಳ್ಳಿಹಾಕಿದೆ.

‘ಭಾರತದಿಂದ ಎದುರಾಗಬಹುದಾದ ಯಾವುದೇ ಬೆದರಿಕೆಯನ್ನು ಎದುರಿಸುವ ಸಲುವಾಗಿ ಚೀನಾ ರಕ್ಷಣಾ ವ್ಯವಸ್ಥೆಯನ್ನು ಉನ್ನತೀಕರಿಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ’ ಎಂದು ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪತ್ರಿಕೆಯು ಮಂಗಳವಾರ ವರದಿ ಪ್ರಕಟಿಸಿತ್ತು.

ವರದಿಯ ಬಗ್ಗೆ ತನಗೇನೂ ಮಾಹಿತಿ ಇಲ್ಲ ಎಂದಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಗೆಂಜ್ ಶುವಾಂಗ್, ‘ಗಡಿ ಪ್ರದೇಶದಲ್ಲಿ ಶಾಂತಿ ಸ್ಥಾಪನೆ ಎರಡೂ ರಾಷ್ಟ್ರಗಳಿಗೂ ಮುಖ್ಯವಾದ ಅಂಶ. ಹೀಗಾಗಿ ಉಭಯ ರಾಷ್ಟ್ರಗಳು ಒಟ್ಟಾಗಿ ಶ್ರಮಿಸಬೇಕು’ ಎಂದಿದ್ದಾರೆ.

ವರದಿಗೆ ಸಂಬಂಧಿಸಿ ಚೀನಾ ರಕ್ಷಣಾ ಸಚಿವಾಲಯ ಈವರೆಗೂ ಪ್ರತಿಕ್ರಿಯೆ ನೀಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry