ಭಾರತ ಸಂಜಾತನ ಮೇಲೆ ಜನಾಂಗೀಯ ಹಲ್ಲೆ

7
ಬ್ರಿಟನ್

ಭಾರತ ಸಂಜಾತನ ಮೇಲೆ ಜನಾಂಗೀಯ ಹಲ್ಲೆ

Published:
Updated:

ಲಂಡನ್: ಭಾರತ ಸಂಜಾತ ಸಿಖ್ ವ್ಯಕ್ತಿಯ ಟರ್ಬನ್ ಅನ್ನು ಎಳೆದ ಶ್ವೇತವರ್ಣಿಯನೊಬ್ಬ, ‘ಮುಸ್ಲಿಮರೇ ತೊಲಗಿ’ ಎಂದು ಘೋಷಣೆ ಕೂಗಿದ್ದಾನೆ.

ಪಂಜಾಬ್‌ನ ರವ್ನೀತ್ ಸಿಂಗ್ (37) ಎಂಬುವವರು ಇಲ್ಲಿನ ಲೇಬರ್ ಪಕ್ಷದ ಜನಪ್ರತಿನಿಧಿ ತನ್ಮನ್‌ಜೀತ್ ಸಿಂಗ್ ಅವರನ್ನು ಭೇಟಿಯಾಗಲು ಬ್ರಿಟನ್ ಸಂಸತ್ತಿನ ಆವರಣದಲ್ಲಿ ಬುಧವಾರ ಕಾಯುತ್ತಿದ್ದರು. ಆ ವೇಳೆ ಜನಾಂಗೀಯ ದಾಳಿ ನಡೆದಿದೆ ಎಂದು ‘ದಿ ಇಂಡಿಪೆಂಡೆಂಟ್’ ಪತ್ರಿಕೆ ವರದಿ ಮಾಡಿದೆ.

‘ಪೋರ್ಟ್‌ಕ್ಯುಲಿಸ್ ಹೌಸ್‌ ಎದುರು ನಾನು ಸಾಲಿನಲ್ಲಿ ನಿಂತಿದ್ದೆ. ಆ ವ್ಯಕ್ತಿ ಟರ್ಬನ್ ಎಳೆದಾಗ ಅರ್ಧ ಬಿಚ್ಚಿಕೊಂಡಿತು. ಅವನು ಇನ್ನೇನಾದರೂ ಮಾಡಬಹುದು ಎಂದುಕೊಂಡು ಜೋರಾಗಿ ಕೂಗಿದೆ. ಆಗ ಓಡಿಹೋದ’ ಎಂದು ರವ್ನೀತ್ ಅವರ ಮಾತನ್ನು ಪತ್ರಿಕೆ ಉಲ್ಲೇಖಿಸಿದೆ.

‘ನನಗೆ ಅರ್ಥವಾಗದ ಭಾಷೆಯಲ್ಲಿ ಆತ ನಿಂದಿಸಿದ. ಆತ ಬಿಳಿಯನಾಗಿದ್ದರೂ ಇಂಗ್ಲಿಷ್ ಬಲ್ಲವನೆಂದು ಅನ್ನಿಸಿಲ್ಲ’ ಎಂದು ಅವರು ಹೇಳಿದ್ದಾರೆ.

ತಪ್ಪು ಕಲ್ಪನೆಯಿಂದಾಗಿ ಬ್ರಿಟನ್‌ನಲ್ಲಿ ಸಿಖ್ಖರ ಮೇಲೆ ಇಂಥ ದಾಳಿಗಳು ಪದೇ ಪದೇ ನಡೆಯುತ್ತಲೇ ಇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry