ಅಡಿಕೆ: ರಹಸ್ಯವೇನು?

7

ಅಡಿಕೆ: ರಹಸ್ಯವೇನು?

Published:
Updated:

‘ಅಡಿಕೆ ಆರೋಗ್ಯಕ್ಕೆ ಹಾನಿಕಾರಕ’ ಎಂದು ಕೇಂದ್ರ ಸರ್ಕಾರ ಮತ್ತೆ ಗುಲ್ಲೆಬ್ಬಿಸಿದೆ. ಹಿಂದೆ ಇದೇ ರೀತಿಯ ಹೇಳಿಕೆ ಮನಮೋಹನ್‌ ಸಿಂಗ್ ನೇತೃತ್ವದ ಸರ್ಕಾರದ ಸಚಿವರ ಬಾಯಿಯಿಂದ ಬಂದಾಗ ಬಿಜೆಪಿಯವರು ಅದನ್ನು ಖಂಡಿಸಿ, ‘ನಾವು ಅಧಿಕಾರಕ್ಕೆ ಬಂದರೆ ಅಡಿಕೆ ಬೆಳೆಗಾರರ ಹಿತ ರಕ್ಷಿಸುತ್ತೇವೆ’ ಎಂದಿದ್ದರು. ಅಧಿಕಾರಕ್ಕೂ ಬಂದರು, ಆದರೆ ಯಥಾಪ್ರಕಾರ ಅಡಿಕೆ ನಿಷೇಧದ ಗುಮ್ಮ ಮತ್ತೆ ಸದ್ದು ಮಾಡುತ್ತಿದೆ. ಇದರ ಹಿಂದೆ ಯಾವ ಲಾಬಿ ಕೆಲಸ ಮಾಡುತ್ತಿದೆ?

ಸಿಗರೇಟು, ಬೀಡಿ, ತಂಬಾಕುಗಳು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂಬುದು ಸಾಬೀತಾಗಿದ್ದರೂ ಇವುಗಳ ನಿಷೇಧದ ಬಗ್ಗೆ ಸೊಲ್ಲೆತ್ತದ ಸರ್ಕಾರಗಳು, ಅಡಿಕೆಯೊಂದನ್ನೇ ಗುರಿಯಾಗಿಸುತ್ತಿರುವುದರ ಹಿಂದಿರುವ ರಹಸ್ಯವಾದರೂ ಏನು?

ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮುತ್ತೂರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry