ಭಾನುವಾರ, ಡಿಸೆಂಬರ್ 8, 2019
24 °C

ಭಾರಿ ಸದ್ದಿಗೆ ಬೆಚ್ಚಿದ ಜನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರಿ ಸದ್ದಿಗೆ ಬೆಚ್ಚಿದ ಜನತೆ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಗುರುವಾರ ಮಧ್ಯಾಹ್ನ ಕೇಳಿಸಿದ ಭಾರಿ ಸದ್ದಿಗೆ ಸಾರ್ವಜನಿಕರಲ್ಲಿ ಭೀತಿಯುಂಟಾಗಿದೆ. ಕಿವಿಗಪ್ಪಳಿಸಿದ ಶಬ್ದದ ಮೂಲ ಪತ್ತೆಯಾಗಿಲ್ಲ.

ವಿದ್ಯುತ್‌ ಪರಿವರ್ತಕವೊಂದು ಸ್ಫೋಟಗೊಂಡ ಮಾದರಿಯ ಸದ್ದು ನಗರದ ಎಲ್ಲೆಡೆ ಮಧ್ಯಾಹ್ನ 12.35ರ ಸುಮಾರಿಗೆ ಕೇಳಿಸಿದೆ. ಸದ್ದಿಗೆ ಬೆಚ್ಚಿದ ಕುವೆಂಪುನಗರದ ‘ಎಂ’ಬ್ಲಾಕ್‌ ನಿವಾಸಿಗಳು ಮನೆಯಿಂದ ಹೊರಗೆ ಬಂದಿದ್ದಾರೆ. ಗೋಕುಲಂ, ಕುಂಬಾರಕೊಪ್ಪಲು, ಇಲವಾಲ, ಬನ್ನಿಮಂಟಪ ಹಾಗೂ ವಿಜಯನಗರದಲ್ಲಿಯೂ ಶಬ್ದ ಕಿವಿಗೆ ಬಿದ್ದಿದೆ.

ಭೂಮಿ ಕಂಪಿಸಿದ ಹಾಗೂ ಕಾಲುಗಳು ನಡುಗಿದ ಅನುಭವ ಆಗಿರುವುದಾಗಿ ಕುವೆಂಪುನಗರ ನಿವಾಸಿಗಳು ಹೇಳಿಕೊಂಡಿದ್ದಾರೆ. ಹೀಗಾಗಿ,ಭೂಕಂಪ ಸಂಭವಿಸಿದೆ ಎಂಬ ವದಂತಿ ಹಬ್ಬಿತ್ತು.

‘ಕೆಆರ್‌ಎಸ್‌ನಲ್ಲಿರುವ ರಿಕ್ಟರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ ದಾಖಲಾಗಿಲ್ಲ. ಭೂಮಿ ಕಂಪಿಸಿಲ್ಲ ಎಂಬುದನ್ನು ವಿಪತ್ತು ನಿರ್ವಹಣಾ ಕೇಂದ್ರ ಸ್ಪಷ್ಟಪಡಿಸಿದೆ. ಸ್ಫೋಟದ ಮಾದರಿಯ ಸದ್ದು ಎಲ್ಲಿಂದ ಹೊರಹೊಮ್ಮಿದೆ ಎಂಬುದು ಗೊತ್ತಿಲ್ಲ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ವಿಜ್ಞಾನಿ ಕೆ.ವಿ.ಆರ್‌.ಚೌಧರಿ ಸ್ಪಷ್ಟಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)