ರಾಹುಲ್–ಬಿಎಫ್‌ಸಿ ಒಪ್ಪಂದ ವಿಸ್ತರಣೆ

6

ರಾಹುಲ್–ಬಿಎಫ್‌ಸಿ ಒಪ್ಪಂದ ವಿಸ್ತರಣೆ

Published:
Updated:

ಬೆಂಗಳೂರು (ಪಿಟಿಐ): ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡವು ರಾಹುಲ್ ಬೆಕೆ ಅವರ ಒಪ್ಪಂದವನ್ನು 2021ರವರೆಗೆ ವಿಸ್ತರಿಸಿದೆ ಎಂದು ತಂಡದ ಪ್ರಕಟಣೆ ತಿಳಿಸಿದೆ.

ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಟೂರ್ನಿಯ ಆರಂಭಿಕ ಹಂತದಲ್ಲಿ ಜುಲೈ ತಿಂಗಳಿನಲ್ಲಿ ಮುಂಬೈನ ಡಿಫೆಂಡರ್‌ ರಾಹುಲ್ ಅವರು ಬಿಎಫ್‌ಸಿ ತಂಡವನ್ನು ಸೇರಿಕೊಂಡಿದ್ದರು.

‘ಬಿಎಫ್‌ಸಿ ಮೂರು ವರ್ಷಗಳವರೆಗೆ ಒಪ್ಪಂದವನ್ನು ಮುಂದುವರಿಸಿರುವುದಕ್ಕೆ ಸಂತೋಷವಾಗಿದೆ. ಈ ತಂಡದಲ್ಲಿ ಆಡಲು ಆರಂಭಿಸಿದ ಬಳಿಕ ನನಗೆ ಬಹಳಷ್ಟು ಉತ್ತಮ ಅನುಭವಗಳು ಆಗಿವೆ’ ಎಂದು ರಾಹುಲ್ ಹೇಳಿದ್ದಾರೆ.

ರಾಹುಲ್‌ 20 ಪಂದ್ಯಗಳನ್ನು ಆಡಿದ್ದಾರೆ. ಎಎಫ್‌ಸಿ ಕಪ್‌ ಟೂರ್ನಿಯ ಎರಡು ಪಂದ್ಯಗಳಲ್ಲಿ ಅವರು ಎರಡು ಗೋಲು ಗಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry