ಶುಕ್ರವಾರ, ಡಿಸೆಂಬರ್ 6, 2019
25 °C

ಆಸ್ಟ್ರೇಲಿಯಾ ತಂಡಕ್ಕೆ ಖಾದಿರ್ ಮಗ?

Published:
Updated:
ಆಸ್ಟ್ರೇಲಿಯಾ ತಂಡಕ್ಕೆ ಖಾದಿರ್ ಮಗ?

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಹಿರಿಯ ಆಟಗಾರ ಅಬ್ದುಲ್ ಖಾದಿರ್ ಅವರ ಮಗ ಉಸ್ಮಾನ್ ಅವರು ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಸೇರುವ ಸಿದ್ಧತೆ ನಡೆಸಿದ್ದಾರೆ.

‘2020ರಲ್ಲಿ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸುವ ಗುರಿ ಇದೆ’ ಎಂದು  ಅವರು ಇನ್ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ. ಅದರೊಂದಿಗೆ ಅವರು ಆಸ್ಟ್ರೇಲಿಯಾ ತಂಡದ ಫೋಷಾಕು ತೊಟ್ಟಿರುವ ತಮ್ಮ ಚಿತ್ರವನ್ನೂ ಪೋಸ್ಟ್‌ ಮಾಡಿದ್ದಾರೆ.

ಆಸ್ಟ್ರೇಲಿಯಾ ಲೀಗ್ ಕ್ರಿಕೆಟ್‌ ಟೂರ್ನಿಯಲ್ಲಿ ಒಂಬತ್ತು ಪಂದ್ಯಗಳನ್ನು ಆಡಿ 30 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಬಿಗ್‌ಬ್ಯಾಷ್ ಲೀಗ್ ಟೂರ್ನಿಯಲ್ಲಿ ಪರ್ಥ್ ಸ್ಕಾರ್ಚರ್‌ ತಂಡದ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದಿದ್ದರು.

ಆಲ್‌ರೌಂಡರ್ ಆಗಿರುವ ಉಸ್ಮಾನ್ ಅವರಿಗೆ ಬಾಲ್ಯದಿಂದಲೂ ಆಸ್ಟ್ರೇಲಿಯಾದಲ್ಲಿಯೇ ತರಬೇತಿ ನೀಡಲಾಗುತ್ತಿದೆ. ಪಾಕಿಸ್ತಾನ ಜೂನಿಯರ್ ಕ್ರಿಕೆಟ್‌ ತಂಡದಲ್ಲಿ ಆಡುವ ಅವಕಾಶ ಲಭಿಸಿತ್ತು. ಆದರೆ ಉಸ್ಮಾನ್ ತಂದೆ ಅಬ್ದುಲ್ ಒಪ್ಪಿರಲಿಲ್ಲ.

ಪ್ರತಿಕ್ರಿಯಿಸಿ (+)