ರಘುನಾಥ್‌ಗೆ ಹ್ಯಾಟ್ರಿಕ್ ಗೋಲು

7

ರಘುನಾಥ್‌ಗೆ ಹ್ಯಾಟ್ರಿಕ್ ಗೋಲು

Published:
Updated:

ಬೆಂಗಳೂರು: ವಿ.ಆರ್ ರಘುನಾಥ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಬೆಂಗಳೂರಿನ ಕೊಡವ ಸಮಾಜ ತಂಡ ಇಲ್ಲಿ ನಡೆಯುತ್ತಿರುವ ಫೀಲ್ಡ್‌ ಮಾರ್ಷಲ್ ಕೆ.ಎಮ್‌.ಕಾರ್ಯಪ್ಪ ಸ್ಮಾರಕ ಹಾಕಿ ಪಂದ್ಯದಲ್ಲಿ ಗುರುವಾರ ಜಯದಾಖಲಿಸಿದೆ.

ಕೊಡವ ಸಮಾಜ, ಬೆಂಗಳೂರು ತಂಡ 4–1 ಗೋಲುಗಳಿಂದ ಎಮ್‌ಇಜಿಗೆ ಸೋಲುಣಿಸಿತು. ವಿಜಯೀ ತಂಡದ ರಘುನಾಥ್‌ (6, 41, 42ನೇ ನಿ.) ಮೂರು ಗೋಲು ದಾಖಲಿಸುವ ಮೂಲಕ ಹ್ಯಾಟ್ರಿಕ್ ಸಾಧನೆಗೆ ಕಾರಣರಾದರು. ಕೆ.ಕೆ.ಭರತ್‌ (43ನೇ ನಿ.) ಇನ್ನೊಂದು ಗೋಲು ತಂದುಕೊಟ್ಟರು.

ಕೆನರಾ ಬ್ಯಾಂಕ್ ತಂಡ 3–1 ಗೋಲುಗಳಲ್ಲಿ ಎಎಸ್‌ಸಿ ತಂಡವನ್ನು ಮಣಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry