ಸೆಮಿಫೈನಲ್‌ಗೆ ಕರ್ನಾಟಕ

7

ಸೆಮಿಫೈನಲ್‌ಗೆ ಕರ್ನಾಟಕ

Published:
Updated:

ಬೆಂಗಳೂರು: ಕರ್ನಾಟಕ ತಂಡ ಛತ್ತೀಸಗಡದ ಭಿಲಾಯ್‌ನಲ್ಲಿ ನಡೆಯುತ್ತಿರುವ ಪುರುಷರ ಅಂತರ ರಾಜ್ಯಗಳ ರಾಷ್ಟ್ರೀಯ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.

ಗುರುವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕರ್ನಾಟಕ  2–1ರಲ್ಲಿ ದೆಹಲಿ ತಂಡಕ್ಕೆ ಸೋಲುಣಿಸಿತು. ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಬಿ.ಆರ್‌ ನಿಕ್ಷೇಪ್‌ 6–3, 5–7, 7–5ರಲ್ಲಿ ಗೌರಾಂಗ್ ವಿರುದ್ಧ ಗೆದ್ದರು. ಪ್ರಜ್ವಲ್ ದೇವ್‌ 5–7, 1–6ರಲ್ಲಿ ಯುಗಲ್‌ ಬನ್ಸಾಲ್‌ ಮೇಲೆ ಸೋತರು.

ಡಬಲ್ಸ್ ವಿಭಾಗದ ಅಂತಿಮ ಪಂದ್ಯದಲ್ಲಿ ನಿಕ್ಷೇಪ್‌ ಮತ್ತು ಪ್ರಜ್ವಲ್‌ ಜೋಡಿ 6–2, 6–1ರಲ್ಲಿ ಅಮರನಾಥ್ ಅರೋರಾ ಹಾಗೂ ಯುಗಲ್ ಬನ್ಸಾಲ್ ಎದುರು ಜಯಭೇರಿ ದಾಖಲಿಸಿತು.

ಮುಂದಿನ ಪಂದ್ಯದಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರ ಎದುರು ಆಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry