ಶುಕ್ರವಾರ, ಡಿಸೆಂಬರ್ 13, 2019
27 °C

ಜಯದ ವಿಶ್ವಾಸದಲ್ಲಿ ಬ್ಲಾಸ್ಟರ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ಜಯದ ವಿಶ್ವಾಸದಲ್ಲಿ ಬ್ಲಾಸ್ಟರ್ಸ್‌

ಕೊಚ್ಚಿ (ಪಿಟಿಐ): ಕೇರಳ ಬ್ಲಾಸ್ಟರ್ಸ್ ತಂಡ ಶುಕ್ರವಾರದ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ಸವಾಲು ಎದುರಿಸಲಿದೆ.

ತವರಿನ ಅಂಗಳದಲ್ಲಿ ಆಡುವ ಬ್ಲಾಸ್ಟರ್ಸ್ ತಂಡ ಜಯಿಸುವ ವಿಶ್ವಾಸದಲ್ಲಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಈ ತಂಡ ಐದನೇ ಸ್ಥಾನದಲ್ಲಿದೆ. ಆಡಿದ 16 ಪಂದ್ಯಗಳಲ್ಲಿ ಆರರಲ್ಲಿ ಗೆದ್ದಿದೆ. ಆರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಒಟ್ಟು 24 ಪಾಯಿಂಟ್ಸ್‌ಗಳು ಈ ತಂಡದ ಬಳಿ ಇವೆ.

ಜೆಮ್‌ಷೆಡ್‌ಪುರ ಎಫ್‌ಸಿ ಕೇವಲ ಎರಡು ಪಾಯಿಂಟ್ಸ್‌ಗಳ ಅಂತರದಲ್ಲಿ ನಾಲ್ಕನೇ ಸ್ಥಾನ ಹೊಂದಿದೆ. ಆದ್ದರಿಂದ ಬ್ಲಾಸ್ಟರ್ಸ್‌ ತಂಡ ಈ ಪಂದ್ಯ ಗೆದ್ದು ಪ್ಲೇ ಆಫ್‌ ಹಾದಿಯನ್ನು ಸುಗಮ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ.

ಪ್ರತಿಕ್ರಿಯಿಸಿ (+)