ಹುಡುಕಿದ್ದು ಪ್ರಶ್ನೆಪತ್ರಿಕೆ.. ಸಿಕ್ಕಿದ್ದು ಗಾಂಜಾ!

7

ಹುಡುಕಿದ್ದು ಪ್ರಶ್ನೆಪತ್ರಿಕೆ.. ಸಿಕ್ಕಿದ್ದು ಗಾಂಜಾ!

Published:
Updated:

ಹೈದರಾಬಾದ್: ಸೂರ್ಯಪೇಟೆ ನಗರದಲ್ಲಿನ ಗಾಯತ್ರಿ ಜೂನಿಯರ್ ಕಾಲೇಜಿಗೆ ಹೊಂದಿಕೊಂಡ ಖಾಸಗಿ ಹಾಸ್ಟೆಲ್‌ವೊಂದರಲ್ಲಿ 120 ಕೆ.ಜಿ. ಗಾಂಜಾ ಪತ್ತೆಯಾಗಿದೆ.

ಪರೀಕ್ಷೆ ತಯಾರಿಯಲ್ಲಿದ್ದ ವಿದ್ಯಾರ್ಥಿಗಳು ಬುಧವಾರ ಮಧ್ಯರಾತ್ರಿ ವೇಳೆ ಪ್ರಶ್ನೆಪತ್ರಿಕೆ ಎಂದು ನಮೂದಿಸಿ ಮಂಚದಡಿ ಇಟ್ಟಿದ್ದ ಲಕೋಟೆಗಳನ್ನು ತೆರೆದು ನೋಡಿದಾಗ ಅಲ್ಲಿ ಗಾಂಜಾ ಇರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಲಕೋಟೆಯಲ್ಲಿ ಪ್ರಶ್ನೆಪತ್ರಿಕೆಗಳು ಇವೆ ಎಂಬ ನಿರೀಕ್ಷೆ ಹುಡುಗರಲ್ಲಿ ಇತ್ತು. ಸ್ಥಳಕ್ಕೆ ಬಂದ ಸೂರ್ಯಪೇಟೆ ಸರ್ಕಲ್ ಇನ್ಸ್‌ಪೆಕ್ಟರ್ ಶಂಕರ್ ನಾಯ್ಕ್ ಅವರು ಗಾಂಜಾ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಹಾಸ್ಟೆಲ್ ವಾರ್ಡನ್‌ನನ್ನು ವಿಚಾರಣೆ ನಡೆಸಲು ಬಯಸಿದ್ದರು. ಅಷ್ಟೊತ್ತಿಗಾಗಲೇ ಆತ ಅಲ್ಲಿಂದ ನಾಪತ್ತೆಯಾಗಿದ್ದ.

‘ವಾರ್ಡನ್ ನಾಗಯ್ಯನತ್ತ ವಿದ್ಯಾರ್ಥಿಗಳು ಬೊಟ್ಟು ಮಾಡಿದ್ದಾರೆ. ಆತ ಮೆಹಬೂಬ್‌ ನಗರದವನಾಗಿದ್ದು, ಸಮೀಪದ ಕಾಡಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಗಾಂಜಾ ಬೆಳೆಯಲಾಗುತ್ತದೆ. ಅದನ್ನು ದಾಸ್ತಾನು ಮಾಡಲು ಹಾಸ್ಟೆಲ್ ಕಟ್ಟಡವೇ ಸೂಕ್ತ ಎಂದು ವಾರ್ಡನ್ ಭಾವಿಸಿರಬಹುದು’ ಎಂದು ಪೊಲೀಸರು ಹೇಳಿದ್ದಾರೆ.

ಕಾಲೇಜು ಆಡಳಿತ ಮಂಡಳಿಯು ಗಾಂಜಾ ವ್ಯವಹಾರದಲ್ಲಿ ತೊಡಗಿದೆ ಎಂದು ಆರೋಪಿಸಿದ ಕೆಲ ವಿದ್ಯಾರ್ಥಿ ಸಂಘಟನೆಗಳು ಧರಣಿ ನಡೆಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry