ಬುಧವಾರ, ಡಿಸೆಂಬರ್ 11, 2019
26 °C

ಪ್ಯಾನಾಸೋನಿಕ್‌ ‘ಪಿ100’ ಬಿಡುಗಡೆ

Published:
Updated:
ಪ್ಯಾನಾಸೋನಿಕ್‌ ‘ಪಿ100’ ಬಿಡುಗಡೆ

ಬೆಂಗಳೂರು: ಪ್ಯಾನಾಸೋನಿಕ್ ಇಂಡಿಯಾ ಸಂಸ್ಥೆಯು ಆಕರ್ಷಕ ವಿನ್ಯಾಸದ ‘ಪಿ 100’ ಹೆಸರಿನ ಹೊಸ ಸ್ಮಾರ್ಟ್‍ಫೋನ್ ಬಿಡುಗಡೆ ಮಾಡಿದೆ.

ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ ಫೋನ್, 14 ಮೆಗಾಪಿಕ್ಸೆಲ್ ಸಾಮರ್ಥ್ಯದ ಹಿಂಬದಿ ಕ್ಯಾಮೆರಾ ಹೊಂದಿದೆ. ಇದರಲ್ಲಿರುವ ಮಲ್ಟಿ-ಮೋಡ್ ಆಯ್ಕೆಯು  ಚಿತ್ರದ ಗುಣಮಟ್ಟ ಹೆಚ್ಚಿಸಲು ನೆರವಾಗುತ್ತದೆ. ಈ ಹೊಸ ಸ್ಮಾರ್ಟ್‍ಫೋನ್ ಡ್ಯೂರಾಸ್ಪೀಡ್ ತಂತ್ರಜ್ಞಾನ ಹೊಂದಿದೆ. ಇದರಿಂದ ಬಳಕೆ ಮಾಡದ ಆ್ಯಪ್‍ಗಳು ಬ್ಯಾಟರಿ ಮತ್ತು  ಡೇಟಾ ಉಳಿತಾಯ ಮಾಡಲಿವೆ. ಇ–ಕಾಮರ್ಸ್‌ ತಾಣ ಫ್ಲಿಪ್‍ಕಾರ್ಟ್‍ನಲ್ಲಿ ಖರೀದಿಗೆ ಲಭ್ಯವಿದೆ. ಬೆಲೆ ₹ 5,299ರಿಂದ ಆರಂಭವಾಗುತ್ತದೆ.

‘ಸಂಸ್ಥೆಯು`ಗೋಲ್ಡ್ ಉತ್ಸವ್’ ಕೊಡುಗೆ ಬಿಡುಗಡೆ ಮಾಡಿದೆ. ಅದೃಷ್ಟಶಾಲಿ ಗ್ರಾಹಕರು ಈ ಫೋನ್ ಖರೀದಿಸುವಾಗ ವಿಶೇಷ ಉಡುಗೊರೆ ರೂಪದಲ್ಲಿ 10 ಗ್ರಾಂ ಚಿನ್ನ ಗೆಲ್ಲುವ ಅವಕಾಶವಿದೆ’ ಎಂದು ಸಂಸ್ಥೆಯ ವಹಿವಾಟಿನ ಮುಖ್ಯಸ್ಥ ಪಂಕಜ್ ರಾಣಾ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)