ಸೋಮವಾರ, ಡಿಸೆಂಬರ್ 9, 2019
24 °C

ಕೇಂದ್ರದ ಆರೋಗ್ಯ ವಿಮೆ ಯೋಜನೆಗೆ ನಿಲೇಕಣಿ?

ಪಿಟಿಐ Updated:

ಅಕ್ಷರ ಗಾತ್ರ : | |

ಕೇಂದ್ರದ ಆರೋಗ್ಯ ವಿಮೆ ಯೋಜನೆಗೆ ನಿಲೇಕಣಿ?

ನವದೆಹಲಿ (ಪಿಟಿಐ): ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಮಹತ್ವಾಕಾಂಕ್ಷಿ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಗೆ (ಎನ್‌ಎಚ್‌ಪಿಎಸ್‌) ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ರೂಪಿಸಲು ಇನ್ಫೊಸಿಸ್‌ನ ಕಾರ್ಯನಿರ್ವಾಹಕಯೇತರ ಅಧ್ಯಕ್ಷ ನಂದನ್‌ ನಿಲೇಕಣಿ ಅವರ ನೆರವನ್ನು ಕೇಂದ್ರ ಸರ್ಕಾರ ಪಡೆಯುವ ಸಾಧ್ಯತೆ ಇದೆ.

ಆಧಾರ್‌ ಯೋಜನೆಯಂತೆಯೇ ಎನ್‌ಎಚ್‌ಪಿಎಸ್‌ಗೂ ಮಾಹಿತಿ ತಂತ್ರಜ್ಞಾನದ ಬೃಹತ್‌ ವ್ಯವಸ್ಥೆ ಬೇಕಿದೆ. ಯೋಜನೆ ಬಹಳ ದೊಡ್ಡದಾಗಿರುವುದರಿಂದ ಕ್ರಮೇಣ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ವಿಸ್ತರಿಸುತ್ತಲೇ ಇರಬೇಕಾಗುತ್ತದೆ.

ಆಧಾರ್‌ ಯೋಜನೆಯನ್ನು ಜಾರಿಗೊಳಿಸಿದ ಭಾರತೀಯ ವಿಶಿಷ್ಟ ಗುರುತುಚೀಟಿ ಪ್ರಾಧಿಕಾರದ ಅಧ್ಯಕ್ಷರಾಗಿ ನಿಲೇಕಣಿ ಕೆಲಸ ಮಾಡಿದ್ದರು. ಹಾಗೆಯೇ, ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಕೆ ಸರಳೀಕರಣ ಸಮಿತಿಯಲ್ಲಿಯೂ ಅವರು ಸದಸ್ಯರಾಗಿದ್ದಾರೆ.

‘ಎನ್‌ಎಚ್‌ಪಿಎಸ್‌ಗೆ ಆಧಾರ್‌ ನಂತಹ ಮಾದರಿಯೇಬೇಕಿದೆ. ನಿಲೇಕಣಿ ಅವರನ್ನು ಸಂಪರ್ಕಿಸಿದ್ದೇವೆ. ನೆರವಾಗಲು ಅವರು ಒಪ್ಪಿದ್ದಾರೆ’ ಎಂದು ನೀತಿ ಆಯೋಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)