ನವದೆಹಲಿ: ಏಳು ಬ್ಯಾಂಕುಗಳಿಗೆ ₹3,695 ಕೋಟಿ ವಂಚಿಸಿದ ಆರೋಪ ಎದುರಿಸುತ್ತಿರುವ ರೊಟೊಮ್ಯಾಕ್ ಪೆನ್ ಕಂಪನಿಯ ಪ್ರವರ್ತಕ ವಿಕ್ರಮ್ ಕೊಠಾರಿ ಮತ್ತು ಮಗ ರಾಹುಲ್‌ರನ್ನು ಸಿಬಿಐ ಗುರುವಾರ ಬಂಧಿಸಿದೆ. ನಾಲ್ಕು ದಿನಗಳ ತನಿಖೆಯ ಬಳಿಕ ಈ ಬಂಧನ ನಡೆದಿದೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಇಬ್ಬರನ್ನು ಎರಡು ದಿನ ವಿಚಾರಣೆಗೆ ಒಳಪಡಿಸಲಾಗಿತ್ತು. ಬಳಿಕ ಬುಧವಾರ ದೆಹಲಿಗೆ ಬರುವಂತೆ ಸೂಚಿಸಲಾಗಿತ್ತು.
ವಿಕ್ರಮ್ ಹೆಂಡತಿ ಸಾಧನಾ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ. ಅವರನ್ನೂ ಕಾನ್ಪುರದಲ್ಲಿ ವಿಚಾರಣೆ ನಡೆಸಲಾಗಿತ್ತು. ಆದರೆ ದೆಹಲಿಗೆ ಬರುವಂತೆ ಅವರಿಗೆ ಸೂಚಿಸಲಾಗಿಲ್ಲ.
ಸಾಲ ನೀಡಿದ ಏಳು ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ವಂಚನೆಯ ಬಗ್ಗೆ ಸಿಬಿಐಗೆ ಭಾನುವಾರ ದೂರು ನೀಡಿತ್ತು.