ಮಂಗಳವಾರ, ಡಿಸೆಂಬರ್ 10, 2019
23 °C
ಬಿಡದಿಯ ಇನೋವೇಟಿವ್‌ ಫಿಲ್ಮ್‌ ಸಿಟಿಯಲ್ಲಿ ಅಗ್ನಿ ಅವಘಡ

ಬಿಗ್‌ಬಾಸ್ ಸೆಟ್ ಬೆಂಕಿಗೆ ಆಹುತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಗ್‌ಬಾಸ್ ಸೆಟ್ ಬೆಂಕಿಗೆ ಆಹುತಿ

ಬಿಡದಿ (ರಾಮನಗರ): ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಇನೋವೇಟಿವ್‌ ಫಿಲ್ಮ್‌ ಸಿಟಿಯಲ್ಲಿ ಗುರುವಾರ ನಸುಕಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಇದರಿಂದಾಗಿ ಮೇಣದ ಕಲಾಕೃತಿಗಳ ಸಂಗ್ರಹಾಲಯ, ಬಿಗ್‌ ಬಾಸ್‌ ಕಾರ್ಯಕ್ರಮದ ಸೆಟ್‌ ಹಾಗೂ ಅದರ ತದ್ರೂಪ ಸೆಟ್‌ ಬೆಂಕಿಗೆ ಆಹುತಿಯಾದವು.

ಬೆಳಗಿನ ಜಾವ 3.30ರ ಸುಮಾರಿಗೆ ವಸ್ತುಸಂಗ್ರಹಾಲಯದಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿತು. 60–70ಕ್ಕೂ ಹೆಚ್ಚು ಅಪರೂಪದ ಮೇಣದ ಕಲಾಕೃತಿಗಳು ಒಂದೊಂದಾಗಿ ಅಗ್ನಿಗೆ ಆಹುತಿಯಾದವು. ಕ್ರಮೇಣ ‘ಬಿಗ್‌ಬಾಸ್‌–ಸೀಸನ್‌ 5’ ಕಾರ್ಯಕ್ರಮದ ಸೆಟ್‌ ಹಾಗೂ ಅದೇ ಮಾದರಿಯಲ್ಲಿ ಪ್ರೇಕ್ಷಕರ ವೀಕ್ಷಣೆಗೆಂದು ನಿರ್ಮಿಸಿದ್ದ ಸೆಟ್‌ಗೂ ಬೆಂಕಿ ವ್ಯಾಪಿಸಿತು. ಪರಿಸ್ಥಿತಿ ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಪರದಾಡಿದರು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.

‘ಅವಘಡಕ್ಕೆ ಶಾರ್ಟ್‌ ಸರ್ಕಿಟ್‌ ಕಾರಣ ಇರಬಹುದು ಎಂದು ಶಂಕಿಸಲಾಗಿದ್ದು, ತನಿಖೆ ನಂತರವಷ್ಟೇ ಕಾರಣ ತಿಳಿಯಲಿದೆ’ ಎಂದು ಅಗ್ನಿಶಾಮಕ ದಳದ ಉಪ ನಿರ್ದೇಶಕ ವರದರಾಜನ್‌ ತಿಳಿಸಿದರು.

₹9 ಕೋಟಿ ನಷ್ಟ:

‘ಅಗ್ನಿ ಅವಘಡದಿಂದಾಗಿ ಮ್ಯೂಸಿಯಂ ಹಾಗೂ ಎರಡು ಸೆಟ್‌ಗಳು ಸಂಪೂರ್ಣ ಸುಟ್ಟಿದ್ದು, ₹9 ಕೋಟಿ ನಷ್ಟ ಸಂಭವಿಸಿದೆ’ ಎಂದು ಫಿಲ್ಮ್‌ ಸಿಟಿಯ ವ್ಯವಸ್ಥಾಪಕರು ಬಿಡದಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)