ಸೋಮವಾರ, ಡಿಸೆಂಬರ್ 9, 2019
22 °C

ಮಿಂಚಿನಂತೆ ಓಡಿ ರನ್‌ ಗಳಿಸಲು ಮನೀಷ್‌ಗೆ ಬಿಸಿ ಮುಟ್ಟಿಸಿದ ದೋನಿ: ವಿಡಿಯೊ ವೈರಲ್

Published:
Updated:
ಮಿಂಚಿನಂತೆ ಓಡಿ ರನ್‌ ಗಳಿಸಲು ಮನೀಷ್‌ಗೆ ಬಿಸಿ ಮುಟ್ಟಿಸಿದ ದೋನಿ: ವಿಡಿಯೊ ವೈರಲ್

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧ ಫೆ.21ರಂದು ನಡೆದ ಎರಡನೇ ಟ್ವಿಂಟಿ–20 ಪಂದ್ಯದಲ್ಲಿ ಮಹೇಂದ್ರಸಿಂಗ್ ದೋನಿ ಅವರು ಬ್ಯಾಟಿಂಗ್ ಮಾಡುವಾಗ ಪಿಚ್‌ನಲ್ಲಿ ಮಿಂಚಿನಂತೆ ಓಡಿ ರನ್‌ ಗಳಿಸುವಂತೆ ಮನೀಷ್‌ ಪಾಂಡೆಗೆ ಸೂಚನೆ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಬುಧವಾರ ನಡೆದ ಪಂದ್ಯದಲ್ಲಿ ಮನೀಷ್ ಪಾಂಡೆ ಅವರು ದೋನಿಯ ಕೋಪಕ್ಕೆ ಗುರಿಯಾದರು. 20ನೇ ಓವರ್‌ನ ಮೊದಲ ಎಸೆತದಲ್ಲಿ ಎರಡನೇ ರನ್ ಓಡಲು ಪಾಂಡೆ ನಿರಾಕರಿಸಿದರು. ಇದರಿಂದ ಸಿಟ್ಟಿಗೆದ್ದ ದೋನಿ, ಪಾಂಡೆಯನ್ನು ಕರೆದು ತಪ್ಪು ತಿದ್ದಿಕೊಳ್ಳುವಂತೆ ಹೇಳಿದರು.

ದೋನಿಯವರ ಬಿರುನುಡಿಗಳು ಸ್ಟಂಪ್‌ನ ಮೈಕ್‌ನಲ್ಲಿ ದಾಖಲಾಗಿವೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಂಡವು ಸಂಕಷ್ಟದಲ್ಲಿದ್ದಾಗ ದೋನಿ ಮತ್ತು ಮನೀಷ್ ಐದನೇ ವಿಕೆಟ್ ಜೊತೆಯಾಟದಲ್ಲಿ 98 ರನ್‌ಗಳನ್ನು ಗಳಿಸಿ ಆಸರೆಯಾದರು.

ಮಹೇಂದ್ರಸಿಂಗ್ ದೋನಿ ಅವರು ಬ್ಯಾಟಿಂಗ್ ಮಾಡುವಾಗ ಪಿಚ್‌ನಲ್ಲಿ ಮಿಂಚಿನಂತೆ ಓಡಿ ರನ್‌ ಗಳಿಸಿ ಗಮನ ಸೆಳೆಯುತ್ತಾರೆ. ಇನ್ನೊಂದು ಬದಿಯಲ್ಲಿರುವ ಬ್ಯಾಟ್ಸ್‌ಮನ್ ಕೂಡ ಅವರಿಗೆ ಸರಿಸಾಟಿಯಾಗಿ ಓಡುವಂತಿದ್ದರೆ ಒಂದು, ಎರಡು ರನ್‌ಗಳು ತಂಡದ ಖಾತೆಗೆ ಸೇರಿ ಎದುರಾಳಿ ಫೀಲ್ಡರ್‌ಗಳು ಒತ್ತಡಕ್ಕೆ ಸಿಲುಕುತ್ತಾರೆ. ಒಂದೊಮ್ಮೆ ಇನ್ನೊಂದು ಬದಿಯ ಬ್ಯಾಟ್ಸ್‌ಮನ್ ಚುರುಕಾಗಿ ಓಡದಿದ್ದರೆ ದೋನಿಯ ಕೆಂಗಣ್ಣಿಗೆ ಗುರಿಯಾಗುವುದು ಖಚಿತ.

ಪ್ರತಿಕ್ರಿಯಿಸಿ (+)