ಶುಕ್ರವಾರ, ಡಿಸೆಂಬರ್ 6, 2019
26 °C

ನಮ್ಮ ಮಾರ್ಗಗಳು ಬೇರೆ; ಆದರೆ ಗುರಿ ಒಂದೇ: ಕಮಲ್‌ ಹಾಸನ್‌ ನಿರ್ಧಾರಕ್ಕೆ ರಜನಿ ಮೆಚ್ಚುಗೆ‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನಮ್ಮ ಮಾರ್ಗಗಳು ಬೇರೆ; ಆದರೆ ಗುರಿ ಒಂದೇ: ಕಮಲ್‌ ಹಾಸನ್‌ ನಿರ್ಧಾರಕ್ಕೆ ರಜನಿ ಮೆಚ್ಚುಗೆ‌

ಚೆನ್ನೈ: ತಮಿಳು ನಟ ಕಮಲ್‌ ಹಾಸನ್‌ ಅವರು ಹೊಸ ರಾಜಕೀಯ ಪಕ್ಷ ಸ್ಥಾಪಿಸಿರುವ ನಿರ್ಧಾರ ಒಳ್ಳೆಯದು ಎಂದು ನಟ ರಜನಿಕಾಂತ್‌ ಅಭಿಪ್ರಾಯಪಟ್ಟಿದ್ದಾರೆ.

‘ಕಮಲ್‌ ಹಾಸನ್‌ ಕರೆದಿದ್ದ ಸಾರ್ವಜನಿಕ ಸಭೆ ಉತ್ತಮವಾಗಿತ್ತು. ನಾನು ಸಹ ಕಾರ್ಯಕ್ರಮವನ್ನು ವೀಕ್ಷಿಸಿದೆ. ನಮ್ಮ ಗುರಿ ಒಂದೇ ಆಗಿದ್ದು, ಸಾಧಿಸುವ ಮಾರ್ಗಗಳು ಬೇರೆಯಾಗಿವೆ. ಒಟ್ಟಾರೆ ಜನರಿಗೆ ಒಳ್ಳೆಯದನ್ನೆ ಮಾಡುತ್ತೇವೆ’ ಎಂದು ರಜನಿಕಾಂತ್‌ ಹೇಳಿದ್ದಾರೆ.

ನಟ ಕಮಲ್ ಹಾಸನ್ ತಮ್ಮ ರಾಜಕೀಯ ಪಕ್ಷ ‘ಮಕ್ಕಳ್ ನೀದಿ ಮಯ್ಯಂ’ ಅನ್ನು ಬುಧವಾರ ವಿಧ್ಯುಕ್ತವಾಗಿ ಉದ್ಘಾಟಿಸಿದ್ದರು.

ಪಕ್ಷದ ಹೆಸರನ್ನು ಘೋಷಿಸುವ ಮುನ್ನ ಕಮಲ್ ಪಕ್ಷದ ಧ್ವಜವನ್ನು ಬಿಡುಗಡೆ ಮಾಡಿದರು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಕಮಲ್ ಅಭಿಮಾನಿಗಳು ಪಕ್ಷದ ಧ್ವಜ ನೋಡಿ ಹರ್ಷೋದ್ಗಾರ ಮಾಡುತ್ತಿರುವಂತೆಯೇ ಅವರು ಪಕ್ಷದ ಹೆಸರನ್ನು ಘೋಷಿಸಿದರು. ಮಕ್ಕಳ್ ನೀದಿ ಮಯ್ಯಂ ಎಂದರೆ ‘ಜನ ನ್ಯಾಯ ಕೇಂದ್ರ’ ಎಂದು ಅರ್ಥ ಎಂದಿದ್ದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಎಎಪಿ ನಾಯಕ ಸೋಮನಾಥ್ ಭಾರ್ತಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ದೆಹಲಿಯಿಂದ ಬಂದಿದ್ದರು.

ಇದನ್ನೂ ಓದಿ...

ತಮಿಳು ಮತದಾರರು ಮತ್ತು ಕಮಲ್‌ ರಾಜಕಾರಣ

ಕಮಲ್‌ ರಾಜಕೀಯ ಪಕ್ಷ ಘೋಷಣೆ

ಪ್ರತಿಕ್ರಿಯಿಸಿ (+)