ಶುಕ್ರವಾರ, ಡಿಸೆಂಬರ್ 13, 2019
27 °C

ಹೆಣ್ಣು ಮಗುವಿನ ತಂದೆಯಾದ ಚೇತೇಶ್ವರ್‌ ಪೂಜಾರ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಹೆಣ್ಣು ಮಗುವಿನ ತಂದೆಯಾದ ಚೇತೇಶ್ವರ್‌ ಪೂಜಾರ

ಮುಂಬೈ: ಭಾರತ ಕ್ರಿಕೆಟ್‌ ತಂಡದ ಆಟಗಾರ ಚೇತೇಶ್ವರ್‌ ಪೂಜಾರ ಅವರು ಶುಕ್ರವಾರ ತಂದೆಯಾಗಿದ್ದಾರೆ. ಪೂಜಾರ ಅವರ ಪತ್ನಿ ಪೂಜಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

‘ನಮ್ಮ ಜೀವನದಲ್ಲಿ ಬರುವ ಹೊಸ ಪಾತ್ರಗಳು ನಮ್ಮನ್ನು ಹೆಚ್ಚು ರೋಮಾಂಚನಗೊಳಿಸುತ್ತವೆ. ನಾವು ಹೊಂದಿದ್ದ ಆಶಯವನ್ನು ಈಕೆ ನಿಜ ಮಾಡಿದಳು!’ ಎಂದು ಮಗುವಿನೊಂದಿಗೆ ಕಾಣಿಸಿಕೊಂಡ ಫೋಟೊವನ್ನು ಪೂಜಾರ ಟ್ವಿಟರ್‌, ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಪೂಜಾರ 2018ರ ಇಂಡಿಯನ್‌ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್‌) ಹರಾಜಿನಲ್ಲಿ ಖರೀದಿಯಾಗದೇ ಉಳಿದಿದ್ದಾರೆ.

ಸದ್ಯ ನಡೆಯುತ್ತಿರುವ ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪೂಜಾರ ಪ್ರತಿನಿಧಿಸುವ ಸೌರಾಷ್ಟ್ರ ತಂಡ ಗುರುವಾರ ಬರೋಡವನ್ನು ಮೂರು ವಿಕೆಟ್‌ಗಳಿಂದ ಮಣಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದೆ.

ಪ್ರತಿಕ್ರಿಯಿಸಿ (+)