ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗರೂಪದಲ್ಲಿ ‘ಸಾಲುಮರಗಳ ತಾಯಿ ತಿಮ್ಮಕ್ಕ’

Last Updated 23 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ತಮ್ಮ ಹಳ್ಳಿ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಅವುಗಳು ಹೆಮ್ಮರವಾಗುವ ತನಕ ಮಗುವಿನಂತೆ ಜೋಪಾನ ಮಾಡಿದವರು ಸಾಲುಮರದ ತಿಮ್ಮಕ್ಕ. ನಿಜಾರ್ಥದಲ್ಲಿ ಪರಿಸರದ ಸಂರಕ್ಷಕಿ ಆಗಿರುವ ತಿಮ್ಮಕ್ಕ ಅವರ ಜೀವನ ಚರಿತ್ರೆ ಆಧರಿಸಿದ ನಾಟಕವನ್ನು ಪ್ರವರ ಆರ್ಟ್ ಸ್ಟುಡಿಯೊ ಸಿದ್ಧಪಡಿಸಿದೆ.

ಬೇಲೂರು ರಘುನಂದನ್ ರಚಿಸಿರುವ ನಾಟಕವನ್ನು ಹನು ರಾಮಸಂಜೀವ ನಿರ್ದೇಶಿಸಿದ್ದಾರೆ.

ಸಾಲುಮರದ ತಿಮ್ಮಕ್ಕ ಒಂದು ಶಕ್ತಿಯಾಗಿ ಅನೇಕರ ಹಸಿರು ಪ್ರೇಮಕ್ಕೆ ಪ್ರೇರಣೆಯಾಗಿದ್ದಾರೆ. ಬಿಬಿಸಿ ಸಿದ್ಧಪಡಿಸಿರುವ ವಿಶ್ವದ ನೂರು ಪ್ರಭಾವಿ ಮಹಿಳೆಯರಲ್ಲಿ ಸ್ಥಾನ ಗಳಿಸಿರುವ ಸಾಲುಮರದ ತಿಮ್ಮಕ್ಕ ಅವರ ಜೀವನದ ವಿವಿಧ ಆಯಾಮಗಳನ್ನು ನಾಟಕ ಒಳಗೊಂಡಿದೆ. ಈ ನಾಟಕವನ್ನು ನೋಡಲು ಸ್ವತಃ ಸಾಲುಮರದ ತಿಮ್ಮಕ್ಕ ಅವರೇ ಬರುತ್ತಿದ್ದು, ನಾಟಕ ಮುಗಿದ ನಂತರ ಪ್ರೇಕ್ಷಕರಿಗೆ ಗಿಡಗಳನ್ನು ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT