7

ಅವಧಿ ವಿಸ್ತರಣೆ ಸೂಕ್ತ

Published:
Updated:

ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾ ತಿದ್ದುಪಡಿಗೆ ಮುಂದಾಗಿರುವುದು ಒಂದು ಶ್ಲಾಘನೀಯ ಹೆಜ್ಜೆ. ಕಾರ್ಯಕಾರಿ ಸಮಿತಿಯು ರೂಪಿಸುವ ಕೆಲವು ಯೋಜನೆಗಳನ್ನು ಕಾರ್ಯರೂಪಕ್ಕಿಳಿಸಲು ಹೆಚ್ಚಿನ ಕಾಲಾವಕಾಶ ಬೇಕಾಗುವುದರಿಂದ ಐದು ವರ್ಷದ ಅವಧಿ ಇದ್ದರೆ ಅನುಕೂಲ.

ಸಮಿತಿಯಲ್ಲಿ ಮಹಿಳೆಯರು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಹೆಚ್ಚಿನ ಪ್ರಾತಿನಿಧ್ಯ ಇರಬೇಕೆಂಬುದು ಕೂಡ ಒಳ್ಳೆಯ ವಿಚಾರವೇ. ಲೋಕಸಭೆ ಮತ್ತು ವಿಧಾನಸಭೆಗಳ ಅವಧಿ ಐದು ವರ್ಷ ಇರುವಂತೆ, ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿಗೂ ಐದು ವರ್ಷಗಳ ಅವಧಿ ದೊರೆತರೆ ಸಾರ್ವಜನಿಕರ ಹಣ ಮತ್ತು ಶ್ರಮ ಪೋಲಾಗುವುದು ಸಹ ತಪ್ಪುತ್ತದೆ. ಆದ್ದರಿಂದ ಅವಧಿ ವಿಸ್ತರಣೆ ಸಮಂಜಸವೇ.

ತಾರಾ ಹೆಗಡೆ, ಶಿರಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry