ಬುಧವಾರ, ಡಿಸೆಂಬರ್ 11, 2019
26 °C

ಚೇತರಿಕೆ ಹಾದಿಗೆ ಷೇರುಪೇಟೆ

Published:
Updated:
ಚೇತರಿಕೆ ಹಾದಿಗೆ ಷೇರುಪೇಟೆ

ಮುಂಬೈ (ಪಿಟಿಐ): ಇಳಿಮುಖವಾಗಿದ್ದ ಷೇರುಪೇಟೆ ಸಂವೇದಿ ಸೂಚ್ಯಂಕವು ಶುಕ್ರವಾರ 323 ಅಂಶಗಳ ಏರಿಕೆಯೊಂದಿಗೆ ಚೇತರಿಕೆ ಹಾದಿಗೆ ಮರಳಿದೆ.

ಡಾಲರ್‌ ವಿರುದ್ಧ ರೂಪಾಯಿ ಮೌಲ್ಯ ಹೆಚ್ಚಳ ಮತ್ತು ದೇಶಿ ಸಾಂಸ್ಥಿಕ ಹೂಡಿಕೆದಾರರು ವಹಿವಾಟಿನಲ್ಲಿ ತೊಡಗಿಸಿದ ಬಂಡವಾಳದ ನೆರವಿನಿಂದ ಸೂಚ್ಯಂಕ ಏರಿಕೆ ದಾಖಲಿಸಿತು.

ವಹಿವಾಟಿನ ಒಂದು ಹಂತದಲ್ಲಿ ವಾರದ ಗರಿಷ್ಠ ಮಟ್ಟವಾದ 34,167 ಅಂಶಗಳಿಗೆ ತಲುಪಿದ ಸೂಚ್ಯಂಕ ಕೊನೆಯಲ್ಲಿ 34,142 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ 10,499 ಅಂಶಗಳೊಂದಿಗೆ ಗರಿಷ್ಠ ಮಟ್ಟ ತಲುಪಿತ್ತು. ವಹಿವಾಟಿನ ಕೊನೆಯಲ್ಲಿ 108 ಅಂಶ ಏರಿಕೆಯಾಗಿ 10,491 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ಒಟ್ಟಾರೆ ವಾರದ ವಹಿವಾಟನಲ್ಲಿ ಷೇರುಪೇಟೆ ಸೂಚ್ಯಂಕ 131.39 ಅಂಶಗಳಷ್ಟು ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ 38.75 ಅಂಶಗಳಷ್ಟು ಚೇತರಿಕೆ ಕಂಡಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ₹ 11,400 ಕೋಟಿ ವಂಚನೆ ಪ್ರಕರಣದ ಪ್ರಭಾವ ಮತ್ತು  ವಿತ್ತೀಯ ಕೊರತೆ ತಗ್ಗಿಸಲು ರಿಸರ್ವ್‌ ಬ್ಯಾಂಕ್ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆಯ ಕಾರಣಕ್ಕೆ ಪೇಟೆಯಲ್ಲಿನ ವಹಿವಾಟು ಇತ್ತೀಚಿಗೆ ಸತತ ಕುಸಿತಕ್ಕೆ ಒಳಗಾಗಿತ್ತು.

ಪ್ರತಿಕ್ರಿಯಿಸಿ (+)