ಶುಕ್ರವಾರ, ಡಿಸೆಂಬರ್ 13, 2019
27 °C

ಪಾರೇಖ್‌ ನೇಮಕ ಇನ್ಫಿ ಷೇರುದಾರರ ಅನುಮೋದನೆ

ಪಿಟಿಐ Updated:

ಅಕ್ಷರ ಗಾತ್ರ : | |

ಪಾರೇಖ್‌ ನೇಮಕ ಇನ್ಫಿ ಷೇರುದಾರರ ಅನುಮೋದನೆ

ನವದೆಹಲಿ (ಪಿಟಿಐ): ಸಾಫ್ಟ್‌ವೇರ್‌ ದೈತ್ಯ ಸಂಸ್ಥೆ ಇನ್ಫೊಸಿಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಸಲೀಲ್‌ ಎಸ್‌. ಪಾರೇಖ್‌ ಅವರನ್ನು ನೇಮಕ ಮಾಡಿಕೊಂಡಿರುವುದನ್ನು ಸಂಸ್ಥೆಯ ಷೇರುದಾರರು ಅನುಮೋದಿಸಿದ್ದಾರೆ.

ಮತಪತ್ರ ಮತ್ತು ವಿದ್ಯುನ್ಮಾನ ಮಾದರಿ ಮತದಾನದ ಮೂಲಕ (ಶೇ 97.96) ಷೇರುದಾರರು ಪಾರೇಖ್‌ ನೇಮಕಕ್ಕೆ ತಮ್ಮ ಸಮ್ಮತಿ ಸೂಚಿಸಿದ್ದಾರೆ.  ಯು. ಬಿ. ಪ್ರವೀಣ್‌ ರಾವ್‌ ಅವರನ್ನು ಸಿಒಒ ಮತ್ತು ಪೂರ್ಣ ಪ್ರಮಾಣದ ನಿರ್ದೇಶಕರನ್ನಾಗಿ ನೇಮಿಸಿರುವುದನ್ನೂ ಷೇರುದಾರರು ಅನುಮೋದಿಸಿದ್ದಾರೆ ಎಂದು ಸಂಸ್ಥೆಯು ಮುಂಬೈ ಷೇರುಪೇಟೆಗೆ ತಿಳಿಸಿದೆ.

ಪ್ರತಿಕ್ರಿಯಿಸಿ (+)