ಧನುಷ್‌ ಕ್ಷಿಪಣಿ ಉಡಾವಣೆ ಯಶಸ್ವಿ

7
500 ಕೆ.ಜಿ ಭಾರ ಹೊತ್ತೊಯ್ಯುವ ಸಾಮರ್ಥ್ಯ

ಧನುಷ್‌ ಕ್ಷಿಪಣಿ ಉಡಾವಣೆ ಯಶಸ್ವಿ

Published:
Updated:
ಧನುಷ್‌ ಕ್ಷಿಪಣಿ ಉಡಾವಣೆ ಯಶಸ್ವಿ

ಬಾಲೇಶ್ವರ/ಒಡಿಶಾ : ಅಣ್ವಸ್ತ್ರ ಸಿಡಿತಲೆ ಹೊಂದಿರುವ ‘ಧನುಷ್‌‘ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಶುಕ್ರವಾರ ಯಶಸ್ವಿಯಾಗಿ ನಡೆದಿದೆ.

ನೆಲದಿಂದ ನೆಲಕ್ಕೆ ಚಿಮ್ಮುವ ಈ ಕ್ಷಿಪಣಿ 350 ಕಿ.ಮೀ. ದೂರದವರೆಗಿನ ಗುರಿಯನ್ನು ಕರಾರುವಾಕ್ಕಾಗಿ ಹೊಡೆದು ಉರುಳಿಸುವ ಸಾಮರ್ಥ್ಯ ಹೊಂದಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ಬಂಗಾಳ ಕೊಲ್ಲಿಯಲ್ಲಿ ಲಂಗರು ಹಾಕಿದ್ದ ಐಎನ್‌ಎಸ್‌ ಸುಭದ್ರಾ ನೌಕೆಯಿಂದ ಪರೀಕ್ಷಾರ್ಥ ಉಡ್ಡಯನ ನಡೆಯಿತು. ‘ಪೃಥ್ವಿ’ ಸರಣಿಯ ಈ ಕ್ಷಿಪಣಿಯನ್ನು ಸಾಂಪ್ರದಾಯಿಕ ಹಾಗೂ ಅಣ್ವಸ್ತ್ರ ಯುದ್ಧದಲ್ಲೂ ಬಳಸಬಹುದು. ಸಾಗರ ಹಾಗೂ ದಡದಲ್ಲಿರುವ ವೈರಿ ನೆಲೆಗಳ ಮೇಲೆ ದಾಳಿ ನಡೆಸಲು ಈ ಕ್ಷಿಪಣಿ ಬಳಸಬಹುದಾಗಿದೆ.

‘ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದ್ದು, ನಮ್ಮ ನಿರೀಕ್ಷೆಯಂತೆಯೇ ಕ್ಷಿಪಣಿ ಕೆಲಸ ಮಾಡಿದೆ’ ಎಂದು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಅಧಿಕಾರಿಗಳು ತಿಳಿಸಿದ್ದಾರೆ.

500 ಕೆ.ಜಿ ಭಾರ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಕ್ಷಿಪಣಿ ಈಗಾಗಲೇ ಭಾರತೀಯ ಸೇನೆಯ ಶಸ್ತ್ರಾಸ್ತ್ರ ಸಂಗ್ರಹಾಗಾರ ಸೇರಿದೆ.

ಡಿಆರ್‌ಡಿಒ ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಿದ ಐದು ಕ್ಷಿಪಣಿಗಳ ಪೈಕಿ ಇದು ಕೂಡ ಒಂದು.

ಈ ಮೊದಲು 2015ರಲ್ಲಿ ಕೂಡ ಈ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry