ನವದೆಹಲಿ: ಉದ್ಯೋಗಸ್ಥ ಮಹಿಳೆಯರು ದ್ವಿಚಕ್ರ ವಾಹನ ಖರೀದಿಸಲು ಶೇ 50 ಸಹಾಯಧನ ನೀಡುವ ಸರ್ಕಾರದ ಮಹತ್ತರ ಯೋಜನೆಗೆ ಚಾಲನೆ ನೀಡಲು ಪ್ರಧಾನಿ ಮೋದಿ ಶನಿವಾರ ಚೆನ್ನೈಗೆ ಬರಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜನ್ಮದಿನದ ನಿಮಿತ್ತ ‘ಅಮ್ಮ ದ್ವಿಚಕ್ರ ವಾಹನ’ (ದಿ ಅಮ್ಮ ಟು ವೀಲ್ಹರ್) ಯೋಜನೆಯನ್ನು ಪ್ರಾರಂಭಿಸಲಾಗಿದೆ.
ತಮಿಳುನಾಡು ಸೇರಿದಂತೆ ದಮನ್, ಪುದುಚೇರಿ ಮತ್ತು ಗುಜರಾತ್ಗೆ ಮೋದಿ ಭೇಟಿ ನೀಡಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ದಮನ್ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ, ಫಲಾನುಭವಿಗಳಿಗೆ ಪ್ರಮಾಣಪತ್ರ ಹಸ್ತಾಂತರ ಮಾಡಲಿದ್ದಾರೆ.