ಸೋಮವಾರ, ಮೇ 25, 2020
27 °C

ಭಾರತ ತಂಡಕ್ಕೆ ರಾಣಿ ನಾಯಕಿ

ಪಿಟಿಐ Updated:

ಅಕ್ಷರ ಗಾತ್ರ : | |

ಭಾರತ ತಂಡಕ್ಕೆ ರಾಣಿ ನಾಯಕಿ

ನವದೆಹಲಿ (ಪಿಟಿಐ): ಮಾರ್ಚ್‌ 3ರಿಂದ 12ರವರೆಗೆ ದಕ್ಷಿಣ ಕೊರಿಯಾದಲ್ಲಿ ಸರಣಿ ಆಡಲಿರುವ ಭಾರತ ಹಾಕಿ ತಂಡವನ್ನು ರಾಣಿ ರಾಂಪಾಲ್ ಮುನ್ನಡೆಸಲಿದ್ದಾರೆ.

20 ಆಟಗಾರ್ತಿಯರನ್ನು ಒಳಗೊಂಡ ಭಾರತ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಫಾರ್ವರ್ಡ್‌ ಆಟಗಾರ್ತಿ ಪೂನಮ್‌ ರಾಣಿ ತಂಡಕ್ಕೆ ಮರಳಿದ್ದಾರೆ.

ಏಷ್ಯಾ ಕಪ್‌ನಲ್ಲಿ ಪದಕ ಗೆದ್ದ ಬಳಿಕ ಭಾರತ ತಂಡದ ಮೊದಲ ಪ್ರವಾಸ ಇದಾಗಿದೆ. ನವೆಂಬರ್‌ನಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ 5–4 ಗೋಲುಗಳಿಂದ ಚೀನಾ ಎದುರು ಗೆದ್ದಿತ್ತು.

ದಕ್ಷಿಣ ಕೊರಿಯಾ ಪ್ರವಾಸದಲ್ಲಿ ಭಾರತ ಐದು ಪಂದ್ಯಗಳ ಸರಣಿಯನ್ನು ಆಡಲಿದೆ. ಜಿಂಚುನ್‌ ರಾಷ್ಟ್ರೀಯ ಅಥ್ಲೆಟಿಕ್ ಕೇಂದ್ರದಲ್ಲಿ ಪಂದ್ಯಗಳು ನಡೆಯಲಿವೆ. ಡಿಫೆಂಡರ್ ಸುನಿತಾ ಲಾಕ್ರಾ ಉಪನಾಯಕಿಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಗೋಲ್‌ಕೀಪರ್ ಸವಿತಾಗೆ ವಿಶ್ರಾಂತಿ ನೀಡಲಾಗಿದೆ. ಅವರ ಬದಲಿಗೆ ರಜನಿ ಇತಿಮರ್ಪು ಹಾಗೂ ಸ್ವಾತಿ  ತಂಡವನ್ನು ಸೇರಿದ್ದಾರೆ.

ರಕ್ಷಣಾ ವಿಭಾಗದಲ್ಲಿ ಅನುಭವಿ ದೀಪಿಕಾ ಇದ್ದಾರೆ. ಹೋದ ವರ್ಷ ಮೊಣಕಾಲು ಶಸ್ತ್ರಚಿಕಿತ್ಸೆಗೊಳಗಾಗಿದ್ದ ಅವರು ಚೇತರಿಸಿಕೊಂಡು ಅಂಗಳಕ್ಕೆ ಇಳಿಯಲಿದ್ದಾರೆ.

ತಂಡ ಇಂತಿದೆ: ಫಾರ್ವರ್ಡ್‌: ರಾಣಿ ರಾಂಪಾಲ್‌ (ನಾಯಕಿ), ವಂದನಾ ಕಟಾರಿಯಾ, ಲಾಲ್‌ರೆಂಸಿಯಾಮಿ, ನವಜ್ಯೋತ್ ಕೌರ್‌, ನವನೀತ್ ಕೌರ್‌, ಪೂನಮ್‌ ರಾಣಿ. ಗೋಲ್‌ಕೀಪರ್‌: ರಜನಿ ಇತಿಮರ್ಪು, ಸ್ವಾತಿ. ಡಿಫೆಂಡರ್‌: ದೀಪಿಕಾ, ಸುನಿತಾ ಲಾಕ್ರಾ (ಉಪ ನಾಯಕಿ), ದೀಪ್‌ ಗ್ರೇಸ್‌ ಎಕ್ಕಾ, ಸುಮನ್ ದೇವಿ, ಗುರ್ಜಿತ್ ಕೌರ್‌, ಸುಶೀಲಾ ಚಾನು. ಮಿಡ್‌ಫೀಲ್ಡರ್‌: ಮೋನಿಕಾ, ನಮಿತಾ ಟೊಪ್ಪೊ, ನಿಕ್ಕಿ ಪ್ರಧಾನ್‌, ನೇಹಾ ಗೋಯಲ್‌, ಲಿಲಿಮಾ ಮಿನ್ಜ್‌, ಉದಿತಾ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.