ಬುಧವಾರ, ಡಿಸೆಂಬರ್ 11, 2019
16 °C

ಫುಟ್‌ಬಾಲ್‌: ಸೂಪರ್‌ಸ್ಟಾರ್‌ ಜಯದ ಓಟ

Published:
Updated:
ಫುಟ್‌ಬಾಲ್‌: ಸೂಪರ್‌ಸ್ಟಾರ್‌ ಜಯದ ಓಟ

ವಿಜಯಪುರ: ಆತಿಥೇಯ ವಿಜಯಪುರದ ಸೂಪರ್‌ ಸ್ಟಾರ್‌ ತಂಡ ಬಿ.ಎಂ.ಪಾಟೀಲ ಸ್ಮರಣಾರ್ಥ ಇಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಆಹ್ವಾನಿತ ಫುಟ್‌ಬಾಲ್ ಟೂರ್ನಿಯ ಶುಕ್ರವಾರದ ಪಂದ್ಯದಲ್ಲೂ ಗೆಲುವಿನ ನಾಗಾಲೋಟ ಮುಂದುವರೆಸಿತು.

ಸೂಪರ್‌ ಸ್ಟಾರ್‌ ತಂಡ 5–1 ಗೋಲುಗಳಿಂದ ಸ್ಥಳೀಯ ಬಿಡಿಎಫ್‌ಎ ಬಿಜಾಪುರ ತಂಡದ ಎದುರು ಗೆದ್ದಿತು. ಇನ್ನೊಂದು ಪಂದ್ಯದಲ್ಲಿ ಬೆಳಗಾವಿ ತಂಡದವರು 6–2ರಲ್ಲಿ ಹೈದರಾಬಾದ್‌ ವಿರುದ್ಧ ಜಯ ಸಾಧಿಸಿದರು. ಸ್ಥಳೀಯ ಶಹಾಪೇಟೆ ಸ್ಟಾರ್‌ ತಂಡ 1–0 ಗೋಲಿನಿಂದ ಔರಂಗಾಬಾದ್‌ ತಂಡದ ವಿರುದ್ಧ ಜಯಿಸಿತು.

ಜಹೀರಾಬಾದ್‌ ಹಾಗೂ ಬಿಜಾಪುರ ತಂಡಗಳ ನಡುವಣ ಪಂದ್ಯ ನಿಗದಿತ ಅವಧಿಯಲ್ಲಿ ಗೋಲುರಹಿತವಾಗಿ ಅಂತ್ಯವಾಗಿತ್ತು. ಆದ್ದರಿಂದ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಆಗ ಜಹೀರಾಬಾದ್‌ 3–2 ಗೋಲುಗಳಿಂದ ಗೆಲುವು ಸಾಧಿಸಿತು.

ಪ್ರತಿಕ್ರಿಯಿಸಿ (+)