ಇಂದು, ನಾಳೆ ಹೋಂಡಾ ಕಾರು ವಿನಿಮಯ ಮೇಳ

7

ಇಂದು, ನಾಳೆ ಹೋಂಡಾ ಕಾರು ವಿನಿಮಯ ಮೇಳ

Published:
Updated:

ಬೆಂಗಳೂರು: ಹಲಸೂರಿನ ಆರ್‌ಬಿಎಎನ್ಎಂಎಸ್‌ ಮೈದಾನದಲ್ಲಿ ಶನಿವಾರ ಹಾಗೂ ಭಾನುವಾರ ಹೋಂಡಾ ಕಾರುಗಳ ವಿನಿಮಯ ಮೇಳ ಏರ್ಪಡಿಸಲಾಗಿದೆ.

ಕಂಪನಿಯ ಎಲ್ಲಾ ಬಗೆಯ ಕಾರುಗಳೂ ಇಲ್ಲಿ ಪ್ರದರ್ಶನಗೊಳ್ಳಲಿವೆ. ಇವುಗಳನ್ನು ಪರೀಕ್ಷಾರ್ಥ ಚಲಾಯಿಸುವವರಿಗೆ ಹಾಗೂ ಮೌಲ್ಯಮಾಪನ ನಡೆಸುವವರಿಗೆ ಉಡುಗೊರೆ ನೀಡಲಾಗುವುದು. ವಿನಿಮಯ ಮಾಡಿಕೊಳ್ಳಲು ಬಯಸುವ ಹಳೆಯ ಕಾರುಗಳಿಗೆ ಹರಾಜಿನ ಮೂಲಕ ಉತ್ತಮ ದರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

2017ರ ಆಯ್ದ ಕಾರುಗಳಿಗೆ ₹ 2 ಲಕ್ಷದವರೆಗೂ ರಿಯಾಯಿತಿ ಪಡೆಯುವ ಅವಕಾಶ ಇದೆ. ಹೊಸ ಕಾರುಗಳ ಮೇಲೆ ₹ 10 ಸಾವಿರ ವಿನಿಮಯ ಬೋನಸ್‌ ನೀಡಲಾಗುತ್ತಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry