ಕೆಲಸ ಕಾಯಂಗೊಳಿಸಲು ಗುತ್ತಿಗೆ ನೌಕರರ ಒತ್ತಾಯ

7

ಕೆಲಸ ಕಾಯಂಗೊಳಿಸಲು ಗುತ್ತಿಗೆ ನೌಕರರ ಒತ್ತಾಯ

Published:
Updated:
ಕೆಲಸ ಕಾಯಂಗೊಳಿಸಲು ಗುತ್ತಿಗೆ ನೌಕರರ ಒತ್ತಾಯ

ಬೆಂಗಳೂರು: ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಎಲ್ಲ ನೌಕರರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ‘ರಾಜ್ಯ ಸರ್ಕಾರದ ಕಾಯಂ ಅಲ್ಲದ ನೌಕರರ ಒಕ್ಕೂಟ’ವು ಸ್ವಾತಂತ್ರ್ಯ ಉದ್ಯಾನದ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿತು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಗರ ರೈಲು ನಿಲ್ದಾಣದಿಂದ ಹೊರಟ ಪ್ರತಿಭಟನಾಕಾರರ ಮೆರವಣಿಗೆಯೂ ಉದ್ಯಾನದ ಬಳಿಗೆ ತಲುಪಿತು. ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್‌ನ (ಸಿಐಟಿಯು) ರಾಜ್ಯ ಘಟಕದ ಅಧ್ಯಕ್ಷೆ ಎಸ್.ವರಲಕ್ಷ್ಮೀ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ‘ಗುತ್ತಿಗೆ ನೌಕರರನ್ನು ಕಾಯಂಗೊಳಿಸುವ ಸಂಬಂಧ ಅಧಿಕೃತ ಆದೇಶವನ್ನು ಏಕೆ ಹೊರಡಿಸುತ್ತಿಲ್ಲ’ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry