‘ರೈತರ ದನಿಯಾಗಿದ್ದ ಪುಟ್ಟಣ್ಣಯ್ಯ’

7

‘ರೈತರ ದನಿಯಾಗಿದ್ದ ಪುಟ್ಟಣ್ಣಯ್ಯ’

Published:
Updated:

ಯಾದಗಿರಿ: ‘ರೈತ ಚಳವಳಿಯ ಮೂಲಕ ಗುರುತಿಸಿಕೊಂಡು ರಾಜಕೀಯಕ್ಕೆ ಧುಮುಕಿ ರೈತರ ನೆರವಿಗೆ ಸದಾ ಚಿಂತಿಸುತ್ತಿದ್ದ ಕೆ.ಎಸ್.ಪುಟ್ಟಣ್ಣಯ್ಯ ಈ ನಾಡಿನ ರೈತರ ನಿಜವಾದ ಧ್ವನಿಯಾಗಿದ್ದರು’ ಎಂದು ಕಾಂಗ್ರೆಸ್‌ ಮುಖಂಡ ಚನ್ನಾರಡ್ಡಿ ಪಾಟೀಲ ತುನ್ನೂರು ಹೇಳಿದರು.

ನಗರದಲ್ಲಿ ಗುರುವಾರ ರಾಜ್ಯ ರೈತ ಸಂಘದ ಮುಖಂಡ ಕೆ.ಎಸ್. ಪುಟ್ಟಣ್ಣಯ್ಯ ಅವರ ಸಂತಾಪ ಸಭೆಯಲ್ಲಿ ಅವರು ಮಾತನಾಡಿದರು. ‘ರಾಜ್ಯದಲ್ಲಿ ರೈತ ಚಳವಳಿಯನ್ನು ಪ್ರಬಲಗೊಳಿಸಿದವರಲ್ಲಿ ಪ್ರೊ.ನಂಜುಂಡಪ್ಪ ಅವರೊಂದಿಗೆ ಕೆ.ಎಸ್.ಪುಟ್ಟಣ್ಣಯ್ಯ ಅವರ ಶ್ರಮವೂ ಇದೆ.

ನಂಜುಂಡಪ್ಪ ಅವರ ನಂತರ ರಾಜ್ಯದಲ್ಲಿ ರೈತರ ಪರವಾಗಿ ಅನೇಕ ಹೋರಾಟ ನಡೆಸಿ ರೈತರಿಗೆ ನ್ಯಾಯ ಕೊಡಿಸಿದ ಧೀಮಂತರಾಗಿ ಪುಟ್ಟಣ್ಣಯ್ಯ ಜೀವಿಸಿದ್ದರು. ಅವರ ಅಕಾಲಿಕ ಮರಣ ರೈತರು ಅನಾಥ ರಾಗುವಂತೆ ಮಾಡಿದೆ’ ಎಂದರು.

ಮುಖಂಡರಾದ ಶಾಂತರೆಡ್ಡಿ ದೇಸಾಯಿ, ವಿಶ್ವನಾಥರೆಡ್ಡಿ ಗೊಂದ ಡಗಿ, ಸಿದ್ದಣ್ಣಗೌಡ ಕೂಡ್ಲೂರ್, ಆರ್.ಮಹಾದೇವಪ್ಪ ಅಬ್ಬೆತುಮಕೂರು, ವೈಜನಾಥ ಅಬ್ಬೆತುಮಕೂರು, ಬಸವಂತರಾಯಗೌಡ ನಾಯ್ಕಲ್, ಶರಣಗೌಡ ಅರಿಕೇರಿ, ಶರಣಗೌಡ ತಳಕ, ಮಲ್ಲಣ್ಣಗೌಡ ಕೌಳೂರ್ ಇದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry