ಮಂಗಳವಾರ, ಡಿಸೆಂಬರ್ 10, 2019
20 °C

ಹಾಕಿ ಪಂದ್ಯ ವೀಕ್ಷಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಹಾಕಿ ಪಂದ್ಯ ವೀಕ್ಷಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ

ನವದೆಹಲಿ: ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಪತ್ನಿ ಸಮೇತರಾಗಿ ಶನಿವಾರ ದೆಹಲಿಯಲ್ಲಿನ ಕೆನಡಾ ಹೈಕಮಿಷನ್‌ನಲ್ಲಿ ಹಾಕಿ ಪಂದ್ಯ ವೀಕ್ಷಿಸಿದರು.

ಮಹಿಳಾ ಕ್ರೀಡಾಪಟುಗಳ ಹಾಕಿ ಪಂದ್ಯ ವೀಕ್ಷಿಸಿದ ಬಳಿಕ, ಎಲ್ಲಾ ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರವನ್ನು ದಂಪತಿ ವಿತರಿಸಿ, ಶುಭಕೋರಿದರು.

ಜಸ್ಟಿನ್ ಟ್ರುಡೊ ಅವರು ಪತ್ನಿ ಸೋಫಿ ಗ್ರಗೋರಿ ಹಾಗೂ ಮಕ್ಕಳ ಜತೆಗೂಡಿ ವಾರಕಾಲ ಭಾರತ ಪ್ರವಾಸ ಕೈಗೊಂಡಿದ್ದಾರೆ.

ಪ್ರವಾಸ ವೇಳೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೊದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಸೇರಿದಂತೆ ವಿವಿಧ ಗಣ್ಯರನ್ನು ಭೇಟಿ ಮಾಡಿ ಚರ್ಚೆ ಮಾತುಕತೆ ನಡೆಸಿದ್ದಾರೆ.

* ಇವನ್ನೂ ಓದಿ...
ಏಕತೆಗೆ ಧಕ್ಕೆ ತಂದರೆ ಸಹಿಸಲ್ಲ: ಮೋದಿ ಎಚ್ಚರಿಕೆ

ಪ್ರತಿಕ್ರಿಯಿಸಿ (+)