₹ 22 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ

7

₹ 22 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ

Published:
Updated:

ಶ್ರೀರಂಗಪಟ್ಟಣ: ‘ಕ್ಷೇತ್ರದ ವಿವಿಧೆಡೆ ₹ 22 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು. ತಾಲ್ಲೂಕಿನ ಎಂ. ಶೆಟ್ಟಹಳ್ಳಿ ಗ್ರಾಮದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಕೆ.ಶೆಟ್ಟಹಳ್ಳಿ– ಎಂ.ಶೆಟ್ಟಹಳ್ಳಿ– ಸಬ್ಬನಕುಪ್ಪೆ– ಟಿ.ಎಂ. ಹೊಸೂರು ಗೇಟ್‌ಗೆ ಸಂಪರ್ಕ ಕಲ್ಪಿಸುವ 4.7 ಕಿ.ಮೀ. ರಸ್ತೆಯನ್ನು ₹ 2.6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ನೇರಲಕೆರೆ– ಕಾಲ್ಕೆರೆ– ಕೆರೆಮೇಗಳಕೊಪ್ಪಲು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ 4.3 ಕಿ.ಮೀ. ಉದ್ದದ ರಸ್ತೆಯನ್ನು ₹ 2.4 ಕೋಟಿ ವೆಚ್ಚದಲ್ಲಿ; ನಗುವನಹಳ್ಳಿ– ಚಂದಗಾಲು– ಮೇಳಾಪುರ– ಮಹದೇವಪುರ ಹಾಗೂ ಚನ್ನಹಳ್ಳಿಗೆ ಸಂಪರ್ಕ ಕಲ್ಪಿಸುವ 4.50 ಕಿ.ಮೀ ಸಂಪರ್ಕ ರಸ್ತೆಯನ್ನು ₹ 4 ಕೋಟಿ ವೆಚ್ಚದಲ್ಲಿ ಅಭಿನವೃದ್ಧಿ ಮಾಡಲಾಗುವುದು’ ಎಂದು ಹೇಳಿದರು.

‘ಅರಕೆರೆ– ಮಂಡ್ಯ– ಬನ್ನೂರು ಸಂಪರ್ಕ ರಸ್ತೆಯಿಂದ ಬನ್ನಹಳ್ಳಿ– ಬೆಟ್ಟಹಳ್ಳಿಗೆ ಸೇರುವ 2.90 ಕಿ.ಮೀ. ರಸ್ತೆಯನ್ನು ₹ 2 ಕೋಟಿ ವೆಚ್ಚದಲ್ಲಿ; ಚನ್ನನಕೆರೆ–ಟಿ.ಎಂ. ಹೊಸೂರು– ಆಲಗೂಡು ರಸ್ತೆಯನ್ನು ₹ 2 ಕೋಟಿ ವೆಚ್ಚದಲ್ಲಿ; ಚಿನ್ನಾಯಕನಹಳ್ಳಿ– ತೂಬಿನಕೆರೆ ಸಂಪರ್ಕ ರಸ್ತೆಯನ್ನು ₹ 2 ಕೋಟಿ ವೆಚ್ಚದಲ್ಲಿ; ಗೌಡಹಳ್ಳಿಯಿಂದ ಜಕ್ಕನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ₹ 2 ಕೋಟಿ ವೆಚ್ಚದಲ್ಲಿ; ಬೆಂಗಳೂರು– ನೀಲಗಿರಿ ರಸ್ತೆಯಿಂದ ಉರಮಾರ ಕಸಲಗೆರೆ ಸಂಪರ್ಕ ರಸ್ತೆಯನ್ನು ₹ 3 ಕೋಟಿ ವೆಚ್ಚದಲ್ಲಿ ಹಾಗೂ ಮೊತ್ತಹಳ್ಳಿಯಿಂದ ಮದ್ದೂರು ತಾಲ್ಲೂಕು ಗಡಿ ಸಂಪರ್ಕ ರಸ್ತೆಯನ್ನು ₹ 2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ’ ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಸಿ. ಮರಿಯಪ್ಪ, ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಎಲ್‌.ಲಿಂಗರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ದೇವರಾಜು, ಮನ್‌ಮುಲ್‌ ನಿರ್ದೇಶಕ ಬಿ. ಬೋರೇಗೌಡ, ಲೋಕೋಪಯೋಗಿ ಇಲಾಖೆ ಎಇಇ ಚಿನ್ನಮಾರೇಗೌಡ, ಜಿ.ಎಲ್‌. ಲಕ್ಷ್ಮೇಗೌಡ ಈ ಸಂದರ್ಭದಲ್ಲಿ ಇದ್ದರು. ಇದಕ್ಕೂ ಮುನ್ನ ರಮೇಶ ಬಂಡಿಸಿದ್ದೇಗೌಡ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ 2018ರ ಚುನಾವಣೆಗೆ ಜನರ ಬೆಂಬಲ ಕೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry