ಬುಧವಾರ, ಡಿಸೆಂಬರ್ 11, 2019
16 °C

ಪಕ್ಷಾಂತರ ಮಾಡುವ ಮಾತಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಕ್ಷಾಂತರ ಮಾಡುವ ಮಾತಿಲ್ಲ

ಬಂಗಾರಪೇಟೆ: ನಾನು ಕೊನೆಯವರೆಗೂ ಬಿಜೆಪಿ ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿರುವೆ. ಪಕ್ಷಾಂತರ ಮಾಡುವ ಮಾತಿಲ್ಲ ಎಂದು ಮುಖಂಡ ಗಾಲಿ ಜನಾರ್ಧನರೆಡ್ಡಿ ಹೇಳಿದರು.

ಶುಕ್ರವಾರ ಪಟ್ಟಣದ ಚಂದ್ರಶೇಖರ್ ಅಜಾದ್ ಉದ್ಯಾನದಲ್ಲಿನ ಆಜಾದ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸುದ್ದಿಗಾರರೊಂದಿಗೆ

ಮಾತನಾಡಿದರು.

ಚಂದ್ರಶೇಖರ್ ಆಜಾದ್ ಮಹಾನ್ ದೇಶಭಕ್ತ. ಅವರ ವ್ಯಕ್ತಿತ್ವ ನನ್ನಲ್ಲಿ ಇಲ್ಲದಿದ್ದರೂ ಒಂದು ಕಣದಷ್ಟು ಅವರ ಗುಣ ನನ್ನ ರಕ್ತದಲ್ಲಿದೆ.  ಆಜಾದ್ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದವರು. ಸೋನಿಯಾಗಾಂಧಿ ಅವರ ವಿರುದ್ಧ ಹೋರಾಟ ನಡೆಸುವ ನನ್ನದು ಅದೇ ಪರಿಸ್ಥಿತಿ. ಅಜಾದ್ ಅವರಲ್ಲಿನ ರೋಷ, ಪೌರುಷ ನನ್ನಲ್ಲಿಯೂ ಇದೆ. ಪ್ರಾಣ ಹೋದರೂ ಕಾಂಗ್ರೆಸ್‌ಗೆ ಸೇರುವ ಮನಸ್ಸು ಮಾತ್ರ ಮಾಡವುದಿಲ್ಲ

ಎಂದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ರಘುರಾಮರೆಡ್ಡಿ, ಮುಖಂಡ ಶಂಕರನಾರಾಯಣರೆಡ್ಡಿ, ಪ್ರತಿಮೆ ದಾನಿ ಜನಾರ್ಧನರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ವಿ.ಮಹೇಶ್, ಬಿಜೆಪಿ ತಾಲ್ಲೂಕು ಘಟಕ ಸದಸ್ಯ ಹನುಮಪ್ಪ, ಬಜರಂಗದಳದ ಮಹೇಶ್, ಮಂಜು ಇದ್ದರು.

ಪ್ರತಿಕ್ರಿಯಿಸಿ (+)