ಪಟ್ಟದಕಲ್ಲು ಬಸವಣ್ಣನ ಜಾತ್ರೆ ನಾಳೆ

7

ಪಟ್ಟದಕಲ್ಲು ಬಸವಣ್ಣನ ಜಾತ್ರೆ ನಾಳೆ

Published:
Updated:
ಪಟ್ಟದಕಲ್ಲು ಬಸವಣ್ಣನ ಜಾತ್ರೆ ನಾಳೆ

ಪಟ್ಟದಕಲ್ಲು (ಬಾದಾಮಿ): ವಿಶ್ವಪರಂಪರೆಯ ತಾಣ ಪಟ್ಟದಕಲ್ಲಿನ ವಿರೂಪಾಕ್ಷೇಶ್ವರ ಗುಡಿಯ ಎದುರಿನ ಬಸವಣ್ಣನ ರಥೋತ್ಸವವು ಫೆ. 25ರಂದು ಜರುಗಲಿದೆ ಎಂದು ಬಸವೇಶ್ವರ ಸದ್ಭಕ್ತ ಮಂಡಳಿ ತಿಳಿಸಿದೆ.

ಫೆ. 24ರಂದು ಪಟ್ಟದಕಲ್ಲಿನ ಪ್ರಮುಖ ಬೀದಿಯಲ್ಲಿ ರಥದ ಕಳಸದ ಮೆರವಣಿಗೆ ನಡೆಯಲಿದೆ. ಫೆ. 25ರಂದು ಬೆಳಿಗ್ಗೆ ಬಸವಣ್ಣನ ಮೂರ್ತಿಗೆ ವಿವಿಧ ಪೂಜಾ ಕೈಂಕರ್ಯ ಮತ್ತು ಸಂಜೆ ರಥೋತ್ಸವ ಜರುಗಲಿದೆ. ಇಲ್ಲಿ ಅನೇಕ ಶೈವ ದೇವಾಲಯಗಳಿದ್ದರೂ ಪೂಜೆಗೆ ಅರ್ಹವಾದ ಗುಡಿಗಳು ಕೇವಲ ವಿರೂಪಾಕ್ಷೇಶ್ವರ ಮತ್ತು ಬಸವಣ್ಣನ ಮೂರ್ತಿ ಮಾತ್ರ ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.

ಸ್ಥಳೀಯ ಪಂಚಲಿಂಗೇಶ್ವರ ನಾಟ್ಯ ಸಂಘದಿಂದ ಫೆ.25 ರಂದು ‘ ಪಾಪದ ಕೂಸಿಗೆ ಕರ್ಮದ ತೊಟ್ಟಿಲು’ 26 ರಂದು ಶರಣಬಸವೇಶ್ವರ ನಾಟ್ಯ ಸಂಘದಿಂದ ‘ರೈತನ ಬಾಳಲ್ಲಿ ರಣಹದ್ದುಗಳು,’ 27ರಂದು ಪಾಪವಿನಾಶ್ವರ ನಾಟ್ಯ ಸಂಘದಿಂದ ‘ಹುತ್ತದಲ್ಲಿ ಕೈಯಿಟ್ಟ ಮುತ್ತೈದೆ’ ಎಂಬ ನಾಟಕಗಳನ್ನು ಪ್ರದರ್ಶಿಸುವರು. 28 ರಂದು ಕುಸ್ತಿ ಪ್ರದರ್ಶನಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry