ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಚದಲ್ಲಿ ಬಾಹುಬಲಿ ಅನಾವರಣ

Last Updated 24 ಫೆಬ್ರುವರಿ 2018, 9:07 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಮಹಾ ಮಸ್ತಕಾಭಿಷೇಕ ಮಹೋತ್ಸವ ನಿಮಿತ್ತ ಆಯೋಜಿಸಿರುವ ವಸ್ತುಪ್ರದರ್ಶನದಲ್ಲಿ ಶ್ರೀಕ್ಷೇತ್ರ ಶ್ರವಣಬೆಳಗೊಳದ ಇತಿಹಾಸ ಸಾರುವ ಕಲಾಹಬ್ಬ ಜನರನ್ನು ಸೆಳೆಯುತ್ತಿರುವ ಇನ್ನೊಂದು ಆಕರ್ಷಣೆ.

ವಿಂಧ್ಯಗಿರಿಯಲ್ಲಿ ವಿರಾಜಮಾನ ಭಗವಾನ್‌ ಬಾಹುಬಲಿ ಮೂರ್ತಿಯ ಎದುರು ಧ್ಯಾನಾಸಕ್ತರಾದ ಶ್ರೀಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಚಿತ್ರ, ಭರತ–ಬಾಹುಬಲಿ ನಡುವೆ ನಡೆಯುವ ಜಲಯುದ್ಧ, ಮಲ್ಲಯುದ್ಧ ಮತ್ತು ದೃಷ್ಟಿಯುದ್ಧದ ಚಿತ್ರಣ.

ದೇವರು ಮತ್ತು ನಿಸರ್ಗ, ಅರಿಹಂತ, ಜೈನಮುನಿಗಳ ತಪಸ್ಸು, ಗುಳ್ಳಕಾಯಿ ಅಜ್ಜಿಮಾಡುವ ಅಭಿಷೇಕ, ಮೂರ್ತಿಯ ಸ್ಥಿತಪ್ರಜ್ಞ ಚಿತ್ರ, ವಿಂಧ್ಯಗಿರಿಯ ಮಹಾದ್ವಾರ, ಜೈನ ಬಸದಿಗಳು, ಚಂದ್ರಗಿರಿಯಿಂದ ಕಾಣುವ ವಿಂಧ್ಯಗಿರಿಯ ಬಾಹುಬಲಿ ಮೂರ್ತಿ ವಿಹಂಗಮ ನೋಟ, ಚಂದ್ರಗಿರಿಯಲ್ಲಿ ಮಾನಸ್ತಂಭದ ನೋಟ, ನಿರ್ವಾಣದ ಕಡೆಗೆ ಪಯಣ, ಮಹಾಮಸ್ತಕಾಭಿಷೇಕದ ಚಿತ್ರ.

ಹೀಗೆ ಹತ್ತು, ಹಲವುನೋಟಗಳು ಚಿತ್ರಕಲೆಗಳಲ್ಲಿ ಅರಳಿವೆ. ಇವು ಪ್ರದರ್ಶನದಲ್ಲಿ ಕಲಾಸಕ್ತರ ಗಮನ ಸೆಳೆಯುತ್ತಿದೆ. ಜೈನ ಶಿಲ್ಪಕಲೆ ಕುರಿತು ಚಿತ್ರರಚನೆ ಕಲಾಹಬ್ಬ ಜನವರಿಯಲ್ಲಿ ನಡೆದಿತ್ತು. ಕರ್ನಾಟಕ ಸೇರಿ ವಿವಿಧೆಡೆ ಯಿಂದ 45 ಕಲಾವಿದರು ಆಗಮಿಸಿದ್ದು, ಶ್ರವಣಬೆಳಗೊಳದ ಚಿತ್ರಣ ಹಿಡಿದಿದ್ದಾರೆ.

ಕ್ಷೇತ್ರದ ಚಾರುಕೀರ್ತಿ ಭಟ್ಟಾರಕಸ್ವಾಮೀಜಿ, ಚಿತ್ರ ಬರೆದು ಕಲಾಹಬ್ಬಕ್ಕೆ ಚಾಲನೆ ನೀಡಿದ್ದರು ಕಲಾ ಹಬ್ಬ ಮಾರ್ಚ್‌ವರೆಗೆ ನಡೆಯಲಿದೆ. ಕಲಾವಿದರ ಕೈಚಳಕದಿಂದ ಮೂಡಿರುವ ಬಂದಿರುವ ಸುಂದರ ಚಿತ್ರಗಳನ್ನು ಚಾವುಂಡರಾಯ ವೇದಿಕೆ ಬಳಿ ನಿರ್ಮಿಸಿರುವ ವಸ್ತು ಪ್ರದರ್ಶನದಲ್ಲಿ ಇಡಲಾಗಿದೆ. ಮಹಾಮಸ್ತಕಾಭಿಷೇಕದ ಚಿತ್ರವೂ ಇಲ್ಲಿದೆ.

ಮುಂದಿನ ದಿನಗಳಲ್ಲಿ ಇವುಗಳನ್ನು ಹೈದರಾಬಾದ್, ಬೆಂಗಳೂರು, ಹುಬ್ಬಳ್ಳಿ, ಮಧ್ಯಪ್ರದೇಶದಲ್ಲಿ ಪ್ರದರ್ಶಿ ಸುವ ಉದ್ದೇಶವಿದೆ ಎನ್ನುತ್ತಾರೆ ಆಯೋಜಕರು. ಹಿರಿಯ ಚಿತ್ರಕಲಾವಿದೆ ಪುಷ್ಪಾ ಪಾಂಡೆ, ಇವರ ಪುತ್ರ ರಜತ್‌ ಪಾಂಡೆ ಕಲಾಹಬ್ಬ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ‘ಕಲೆ ಪ್ರೋತ್ಸಾಹಿಸುವ ಕೆಲಸ ನಿರಂತರ ನಡೆಯಲಿದೆ’ ಎನ್ನುತ್ತಾರೆ ಪುಷ್ಪಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT