ರಾಹುಲ್ ಗಾಂಧಿ ನಾಯಕನಲ್ಲ: ಹಾರ್ದಿಕ್ ಪಟೇಲ್

7

ರಾಹುಲ್ ಗಾಂಧಿ ನಾಯಕನಲ್ಲ: ಹಾರ್ದಿಕ್ ಪಟೇಲ್

Published:
Updated:
ರಾಹುಲ್ ಗಾಂಧಿ ನಾಯಕನಲ್ಲ: ಹಾರ್ದಿಕ್ ಪಟೇಲ್

ಮುಂಬೈ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ನಾಯಕನಲ್ಲ ಎಂದು ಪಟೇಲ್‌ ಸಮುದಾಯದ ಯುವ ಮುಖಂಡ ಹಾರ್ದಿಕ್‌ ಪಟೇಲ್‌ ಹೇಳಿದ್ದಾರೆ.

‘ವೈಯಕ್ತಿಕವಾಗಿ ರಾಹುಲ್ ಗಾಂಧಿ ಅವರನ್ನು ನಾನು ಇಷ್ಟಪಡುತ್ತೇನೆ. ಆದರೆ, ಅವರೊಬ್ಬ ನಾಯಕ ಎಂದು ಪರಿಗಣಿಸುವುದಿಲ್ಲ. ಯಾಕೆಂದರೆ ಅವರು ನನ್ನ ನಾಯಕನಲ್ಲ. ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವುದನ್ನು ಕಾಯುತ್ತಿದ್ದೇನೆ’ ಎಂದು ಪಟೇಲ್ ಹೇಳಿದ್ದಾರೆ.

2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವುದಿಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ.

‘ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹನಾದ ಮೇಲೆ ಯಾರಿಂದಲೂ ನನ್ನನ್ನು ತಡೆಯಲು ಸಾಧ್ಯವಿಲ್ಲ. ಆದಾಗ್ಯೂ, ವಿಧಾನಸಭೆ ಅಥವಾ ಸಂಸತ್ತಿನಲ್ಲಿ ಪ್ರತಿನಿಧಿಸಬೇಕಾದರೆ, ಜನರ ನಾಡಿ ಮಿಡಿತ ತಿಳಿಯುವುದು ಮುಖ್ಯ’ ಎಂದು ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.

25 ವರ್ಷ ವಯಸ್ಸು ಪೂರ್ಣಗೊಳ್ಳದಿರುವುದರಿಂದ ಕಳೆದ ವರ್ಷದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪಟೇಲ್ ಸ್ಪರ್ಧಿಸಲಾಗಿರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry