ಐದು ದಿನದ ಮಗುವನ್ನು ಎದೆಗವಚಿಕೊಂಡು ಹುತಾತ್ಮ ಪತಿಯ ಅಂತ್ಯಸಂಸ್ಕಾರಕ್ಕೆ ಆಗಮಿಸಿದ ಮೇಜರ್ ಕುಮುದ್ ಡೊಗ್ರಾ

7

ಐದು ದಿನದ ಮಗುವನ್ನು ಎದೆಗವಚಿಕೊಂಡು ಹುತಾತ್ಮ ಪತಿಯ ಅಂತ್ಯಸಂಸ್ಕಾರಕ್ಕೆ ಆಗಮಿಸಿದ ಮೇಜರ್ ಕುಮುದ್ ಡೊಗ್ರಾ

Published:
Updated:
ಐದು ದಿನದ ಮಗುವನ್ನು ಎದೆಗವಚಿಕೊಂಡು ಹುತಾತ್ಮ ಪತಿಯ ಅಂತ್ಯಸಂಸ್ಕಾರಕ್ಕೆ ಆಗಮಿಸಿದ ಮೇಜರ್ ಕುಮುದ್ ಡೊಗ್ರಾ

ನವದೆಹಲಿ: ಸೇನಾ ಸಮವಸ್ತ್ರ ಧರಿಸಿ ಐದು ದಿನದ ಹೆಣ್ಣು ಮಗುವನ್ನು ಎದೆಗವಚಿಕೊಂಡು ತನ್ನ ಪತಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ ಮಹಿಳಾ ಸೇನಾಧಿಕಾರಿಯೊಬ್ಬರ ಫೋಟೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಆ ಫೋಟೋದಲ್ಲಿರುವ ಮಹಿಳಾ ಸೇನಾಧಿಕಾರಿಯ ಹೆಸರು ಮೇಜರ್ ಕುಮುದ್ ಡೊಗ್ರಾ.

ಫೆಬ್ರುವರಿ 15ರಂದು ಅಸ್ಸಾಂನ ಮಜುಲಿ ಜಿಲ್ಲೆಯಲ್ಲಿ ನಡೆದ ಭಾರತೀಯ ವಾಯುಸೇನೆಯ ಮೈಕ್ರೋಲೈಟ್ ಹೆಲಿಕಾಪ್ಟರ್ ಪತನದಲ್ಲಿ ಸಾವಿಗೀಡಾದ ವಿಂಗ್ ಕಮಾಂಡರ್ ಡಿ ವತ್ಸ್ ಅವರ ಪತ್ನಿ ಮೇಜರ್ ಕುಮುದ್ ಡೊಗ್ರಾ.

ಅಪ್ಪನ ಮುಖ ಕಾಣದ ಹಸುಳೆಯನ್ನು ಎತ್ತಿಕೊಂಡು ಬಂದು ಹುತಾತ್ಮ ಪತಿಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದ ಕುಮುದ್ ಅವರ ಧೈರ್ಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ. ಪತಿಯ ಅಗಲಿಕೆ ದುಃಖಕರ ಸನ್ನಿವೇಶದಲ್ಲೂ ಅವರು ತೋರಿಸಿದ ಅಪ್ರತಿಮ ಧೈರ್ಯಕ್ಕೆ ಇಡೀ ದೇಶವೇ ಬೆರಗಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry